ಸ್ನೇಹಿತರ ಪ್ರಭಾವದಿಂದ ನಾನು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದೆ ! - ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಎಸ್.ಎಸ್. ರಾಜಮೌಳಿ

ಸ್ನೇಹಿತರ ಪ್ರಭಾವದಿಂದ ನಾನು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದೆ ! - ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಎಸ್.ಎಸ್. ರಾಜಮೌಳಿ
ಎಸ್.ಎಸ್. ರಾಜಮೌಳಿ

ವ ದೆಹಲಿ - ನಾನು ನನ್ನ ಕುಟುಂಬದ ಧಾರ್ಮಿಕ ಉತ್ಸವಗಳಲ್ಲಿ ಸಿಲುಕಿದೆನು. ನಾನು ಧಾರ್ಮಿಕ ಗ್ರಂಥಗಳನ್ನು ಓದಲು ಪ್ರಾರಂಭಿಸಿದೆನು. ತೀರ್ಥಯಾತ್ರೆಗಳನ್ನು ಮಾಡಲು ಪ್ರಾರಂಭಿಸಿದೆನು. ಕೇಸರಿ ವಸ್ತ್ರವನ್ನು ಧರಿಸಲು ಪ್ರಾರಂಭಿಸಿದೆನು ಮತ್ತು ಕೆಲವು ವರ್ಷಗಳ ವರೆಗೆ ಸನ್ಯಾಸಿಯಂತೆ ಜೀವಿಸತೊಡಗಿದೆನು.

ಬಳಿಕ ನಾನು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದೆನು. ಅದಕ್ಕಾಗಿ ಕೆಲವು ಮಿತ್ರರಿಗೆ ನಾನು ಆಭಾರಿಯಾಗಿದ್ದೇನೆ. ನಾನು ಬೈಬಲ್ ಓದುತ್ತೇನೆ. ಚರ್ಚಗೆ ಹೋಗುತ್ತೇನೆ ಮತ್ತು ಎಲ್ಲವನ್ನೂ ಮಾಡುತ್ತೇನೆ. ನಿಧಾನವಾಗಿ ನನಗೆ ಈ ಎಲ್ಲ ವಿಷಯಗಳಿಂದ, ಧರ್ಮವು ಒಂದು ರೀತಿಯ ಶೋಷಣೆಯಾಗಿದೆಯೆಂದು ಎನಿಸತೊಡಗಿತು. ಎಂದು ಎಸ್.ಎಸ್. ರಾಜಮೌಳಿಯವರು ಅಮೇರಿಕಾದ ದಿನಪತ್ರಿಕೆ `ದಿ ನ್ಯೂಯಾರ್ಕರ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ರಾಜಮೌಳಿಯವರು ಮಾತನ್ನು ಮುಂದುವರಿಸುತ್ತಾ, ಮಹಾಭಾರತ, ರಾಮಾಯಣಗಳಂತಹ ಕಥೆಗಳ ವಿಷಯಗಳ ಬಗ್ಗೆ ನನ್ನ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ನನ್ನಿಂದ ಏನು ವ್ಯಕ್ತಪಡಿಸಲಾಗುತ್ತದೆಯೋ, ಅವೆಲ್ಲವೂ ಇಂತಹ ಗ್ರಂಥಗಳಿಂದಲೇ ಬಂದಿರುವುದಾಗಿದೆ ಎಂದು ಹೇಳಿದ್ದಾರೆ.