ಸ್ವಯಂಘೋಷಿಸಿ ಕಾಂಗ್ರೆಸ್ ಅಭ್ಯರ್ಥಿ ವರ್ತನೆಗೆ ನೆಟ್ಟಿಗರು ಆಕ್ರೋಶ

ಸ್ವಯಂಘೋಷಿಸಿ ಕಾಂಗ್ರೆಸ್ ಅಭ್ಯರ್ಥಿ ವರ್ತನೆಗೆ ನೆಟ್ಟಿಗರು ಆಕ್ರೋಶ

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾಯಕರ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಲೇ ಇದೆ.
ಇತ್ತ, ಬಿಜೆಪಿ ಕೇಂದ್ರ ನಾಯಕರು ಆಗಾಗ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.

ಇನ್ನು ಕಾಂಗ್ರೆಸ್ ಬಸ್ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್​ನ ನಾಯಕರು ಶಕ್ತಿ ಪ್ರದರ್ಶನ ತೋರಿಸುತ್ತಿದ್ದಾರೆ.ಸ್ವಯಂಘೋಷಿಸಿ ಕಾಂಗ್ರೆಸ್ ಅಭ್ಯರ್ಥಿ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ನೆಲಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಎನ್.ಶ್ರೀನಿವಾಸ್ ಹಜರತ್​ ಸೈಯದ್ ಹಿದಾಯತುಲ್ಲಾ ಷಾ ಖಾದ್ರಿ ಉರುಸ್​ ವೇಳೆ ಮೈಮೇಲೆ ಹಣದ ಮಳೆ ಸುರಿಸಿಕೊಂಡಿದ್ದರು.ವೇದಿಕೆ ಮೇಲೆ ನಿಂತಿದ್ದ ಶ್ರೀನಿವಾಸನ ಮೇಲೆ ಮೂವರು ಹಣ ಸುರಿದಿದ್ದರು. ಶ್ರೀನಿವಾಸನ ಮೇಲೆ ಹಣ ಸುರಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಎನ್.ಶ್ರೀನಿವಾಸ್ ಅವರು ನೆಲಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹರಜತ್‌ ಸೈಯದ್‌ ಹಿದಾಯತುಲ್ಲಾ ಷಾ ಖಾದ್ರಿ ಉರುಸ್‌ ನಲ್ಲಿ ಈ ಘಟನೆ ನಡೆದಿದೆ. ವೇದಿಕೆ ಮೇಲೆ ನಿಂತಿದ್ದ ಶ್ರೀನಿವಾಸನ ಮೇಲೆ ಮೂವರು ಹಣ ಸುರಿದ್ದರು ಎಂಬ ಆರೋಪ ಕೇಳಿಬಂದಿತ್ತು.