ಸೀನಿಯರ್ ಆಫೀಸರ್ ಆದ್ರೂ ಅಷ್ಟು ಗೊತ್ತಾಗೋದಿಲ್ವಾ; ಐಜಿಪಿಗೆ ಗದರಿದ ಸಿಎಂ

ಸೀನಿಯರ್ ಆಫೀಸರ್ ಆದ್ರೂ ಅಷ್ಟು ಗೊತ್ತಾಗೋದಿಲ್ವಾ; ಐಜಿಪಿಗೆ ಗದರಿದ ಸಿಎಂ

ತುಮಕೂರು: ತ್ರಿವಿದ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ ದಾಸೋಹ ದಿನಾಚರಣೆಗೆ ಚಾಲನೆ ನೀಡಿದರು. ಈ ವೇಳೆ ಜನ ಗುಂಪು ಸೇರಿದ್ದಕ್ಕೆ ಐಜಿಪಿ ಮೇಲೆ ಸಿಎಂ ಗದರಿದ ಪ್ರಸಂಗ ನಡೆದಿದೆ.

ಸಿದ್ದಂಗಂಗಾ ಮಠದ ಬಳಿ ಸಿಎಂ ಬೊಮ್ಮಾಯಿ ಕಾರು ಇಳಿಯುತ್ತಿದ್ದಂತೆ ಜನರು ಜಮಾವಣೆಗೊಂಡಿದ್ದಾರೆ. ಈ ವೇಳೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಡಿವೈ ಎಸ್ ಪಿ ಶ್ರೀನಿವಾಸ್ ವಿರುದ್ಧ ಗರಂ ಆದ ಸಿಎಂ, ಜನರು ಸೇರದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.

ಐಜಿಪಿ ಬಳಿ ಸೀನಿಯರ್ ಆಫೀಸರ್ ಆಗಿದ್ದೀಯಾ ಅಷ್ಟು ಗೊತ್ತಾಗೊಲ್ವಾ ನಿನಗೆ ಜನ ದೂರ ನಿಲ್ಲುವಂತೆ ಹೇಳು ಎಂದು ಏರುದ್ವನಿಯಲ್ಲಿ ಗುಡುಗಿದ್ದಾರೆ.