ಸರ್ಕಾರಿ ನೌಕರರ ನಿಯೋಗದ ಜೊತೆಗಿನ ಸಭೆ ಮುಕ್ತಾಯ : ಸಂಜೆವರೆಗೂ ಕಾಲಾವಕಾಶ ಕೇಳಿದ ಸಿ.ಎಸ್ ವಂದಿತಾ ಶರ್ಮಾ

ಸರ್ಕಾರಿ ನೌಕರರ ನಿಯೋಗದ ಜೊತೆಗಿನ ಸಭೆ ಮುಕ್ತಾಯ : ಸಂಜೆವರೆಗೂ ಕಾಲಾವಕಾಶ ಕೇಳಿದ ಸಿ.ಎಸ್ ವಂದಿತಾ ಶರ್ಮಾ

ಬೆಂಗಳೂರು : 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರು ನಾಳೆಯಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆ ಸರ್ಕಾರಿ ನೌಕರರ ಜೊತೆ ಮಾತುಕತೆ ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್ ವಂದಿತಾ ಶರ್ಮಾ ಸಭೆ ಕರೆದಿದ್ದರು.

ಇದೀಗ, ವಿಧಾನಸೌ‍ಧದಲ್ಲಿ ನಡೆದ ಸರ್ಕಾರಿ ನೌಕರರ ನಿಯೋಗದ ಜೊತಗಿನ ಸಭೆ ಮುಕ್ತಾಯವಾಗಿದ್ದು, ಎಸ್ ವಂದಿತಾ ಶರ್ಮಾ ಸಂಜೆವರೆಗೂ ಕಾಲಾವಕಾಶ ಕೇಳಿದ್ದಾರೆ ಎಂದು ಸಭೆ ಬಳಿಕ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದೇವೆ, ಅವರು ಸಂಜೆವರೆಗೂ ಕಾಲಾವಕಾಶ ಕೇಳಿದ್ದಾರೆ ಎಂದರು.

ರಾಜ್ಯ ಸರ್ಕಾರಿ ನೌಕರರು ನಾಳೆಯಿಂದ 7ನೇ ವೇತನ ಆಯೋಗ ( 7th Pay Commission ) ಜಾರಿಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕೂಡಲೇ 7ನೇ ವೇತನ ಆಯೋಗದ ಮಧ್ಯಂತರ ವರದಿ ನೀಡುವಂತೆ ಸೂಚಿಸಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೂಡಲೇ ಮಧ್ಯಂತರ ವರದಿ ನೀಡುವಂತೆ ಸೂಚಿಸಿದ್ದೇನೆ. ಇಂದು ಸಂಜೆ ಅಧಿಕಾರಿಗಳ ಜೊತೆಗೆ 7ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇನೆ. ಸರ್ಕಾರಿ ನೌಕರರು ನಮ್ಮವರೇ. ನಾಳೆಯೊಳಗೆ ಎಲ್ಲವೂ ಬಗೆ ಹರಿಯಲಿದೆ ಎಂದಿದ್ದಾರೆ.