ಲಹರಿ ವೇಲುಗೆ ಬಿಜೆಪಿ ಟಿಕೆಟ್‌ ಬೇಕಾಗಿರಬಹುದು, ಅದಕ್ಕೆ ಕಾಂಗ್ರೆಸ್‌ ವಿರುದ್ಧ ಕಾಪಿರೈಟ್‌ ಕೇಸ್‌ ಹಾಕಿಸಿದ್ದು: ನಟಿ ರಮ್ಯಾ.

ಲಹರಿ ವೇಲುಗೆ ಬಿಜೆಪಿ ಟಿಕೆಟ್‌ ಬೇಕಾಗಿರಬಹುದು, ಅದಕ್ಕೆ ಕಾಂಗ್ರೆಸ್‌ ವಿರುದ್ಧ ಕಾಪಿರೈಟ್‌ ಕೇಸ್‌ ಹಾಕಿಸಿದ್ದು: ನಟಿ ರಮ್ಯಾ.

ಬೆಂಗಳೂರು : ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್‌ ಬೇಕಾಗಿರಬಹುದು. ಅದಕ್ಕಾಗಿ ಅವರು ಪ್ರಯತ್ನಿಸುತ್ತಿರಬಹುದು. ಆ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಲಹರಿ ವೇಲು ವಿರುದ್ಧ ನಟಿ ರಮ್ಯಾ ಕಿಡಿಕಾರಿದ್ಧಾರೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಹಿನ್ನೆಲೆ ಈ ವೇಳೆ ಕೆಜಿಎಫ್ ೨ ಹಾಡನ್ನ ಬಳಸಿದ್ದಕ್ಕೆ ಹಕ್ಕು ಸ್ವಾಮ್ಯ ಕಾಯ್ದೆ ಕಾಪಿ ರೈಟ್ ಉಲ್ಲಂಘನೆ ದೂರು ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ರಮ್ಯಾ ಲಹರಿ ಆಡಿಯೋ ಕಂಪನಿ ಮುಖ್ಯಸ್ಥ ಲಹರಿ ವಿರುದ್ದ ಕಿಡಿಕಾರಿದ್ದಾರೆ. ಹಕ್ಕು ಸ್ವಾಮ್ಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ನ್ಯಾಯಾಲವೊಂದು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಮಾಡಿದೆ.

ಈ ಹಿನ್ನೆಲೆ ರಮ್ಯಾ ಟ್ವಿಟ್ಟರ್ ಮೂಲಕ ಕಿಡಿಕಾಡಿದ್ದಾರೆ ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್‌ ಬೇಕಾಗಿರಬಹುದು ಅದಕ್ಕಾಗಿ ಪ್ರಯತ್ನಿಸುತ್ತಿರಬಹುದು ಆ ಕಾರಣಕ್ಕೆ ಈ ರೀತಿ ಮಾಡ್ತಿರೋದು ಬೇಸರದ ಸಂಗತಿ ಅಂತ ಹೇಳಿದ್ಧಾರೆ.