ರೈತರಿಗೆ ಗುಡ್ ನ್ಯೂಸ್ : ಕೃಷಿ ಉತ್ಪನ್ನಗಳ ಸಂಸ್ಕರಣಾ ಸಲಕರಣೆಗಳಿಗಾಗಿ ಅರ್ಜಿ ಆಹ್ವಾನ

ರೈತರಿಗೆ ಗುಡ್ ನ್ಯೂಸ್ : ಕೃಷಿ ಉತ್ಪನ್ನಗಳ ಸಂಸ್ಕರಣಾ ಸಲಕರಣೆಗಳಿಗಾಗಿ ಅರ್ಜಿ ಆಹ್ವಾನ

ಳ್ಳಾರಿ : ಕೃಷಿ ಇಲಾಖೆಯಿಂದ 2022-23ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಸಲಕರಣೆಗಳಿಗಾಗಿ ಬಳ್ಳಾರಿ, ಕುರುಗೋಡು ತಾಲೂಕು ವ್ಯಾಪ್ತಿಯ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಸಂಸ್ಕರಣಾ ಯೋಜನೆಯಡಿಯಲ್ಲಿ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರ, ಶ್ಯಾವಿಗೆ ಯಂತ್ರ, ರಾಗಿ ಕ್ಲೀನಿಂಗ್ ಮಿಲ್, ಪಲ್ವರೈಸರ್, ಕಬ್ಬಿನಹಾಲು ತೆಗೆಯುವ ಯಂತ್ರ, ಮೋಟಾರು ಚಾಲಿತ ಸಣ್ಣ ಎಣ್ಣೆ ಗಾಣ ಸೇರಿದಂತೆ ಇತರೆ ಉಪಕರಣಗಳನ್ನು ಸಹಾಯಧನ ರೂಪದಲ್ಲಿ ವಿತರಣೆ ಮಾಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90 ಮತ್ತು ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಜೊತೆಗೆ ಪಹಣಿ, ಆಧಾರ್ಕಾರ್ಡ್, ಬ್ಯಾಂಕ್ಖಾತೆ ಪುಸ್ತಕ, ಜಾತಿ ಪ್ರಮಾಣ ಪತ್ರ ಹಾಗೂ ಭಾವಚಿತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.