ರೀಲ್ಸ್‌ ಮಾಡೋ ನೆಪದಲ್ಲಿ ಸಾರ್ವಜನಿಕರಿಗೆ ತೊಂದ್ರೆ: ಕಾನೂನು ಕ್ರಮಕ್ಕೆ ಪೋಲಿಸರ ಹಿಂದೇಟು

ರೀಲ್ಸ್‌ ಮಾಡೋ ನೆಪದಲ್ಲಿ ಸಾರ್ವಜನಿಕರಿಗೆ ತೊಂದ್ರೆ: ಕಾನೂನು ಕ್ರಮಕ್ಕೆ ಪೋಲಿಸರ ಹಿಂದೇಟು

ಬೆಂಗಳೂರು: ಕೆಲವು ಮಂದಿ ರೀಲ್ಸ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದರು ಕೂಡ ಪೋಲಿಸರು ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿರುವುದು ಜನತೆಯಲ್ಲಿ ಆಕ್ರೋಶ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಮಂಡ್ಯದ ದೀಪಕ್‌ ಗೌಡ ಎನ್ನುವ ಯುವಕ ಹಂಪಿಯಲ್ಲಿ ನಡೆಸಿದ ಪುಂಡಾಟವೇ ಒಂದು ಉದಾಹರಣೆಗೆ ಕಾರಣವಾಗಿದೆ.

ಕೆಲವು ಮಂದಿ ಕಾರು ಡ್ರೈವ್‌ ಮಾಡುತ್ತ, ಬೈಕ್‌ ಓಡಿಸುತ್ತ ವಿಡಿಯೋ ಮಾಡುತ್ತಿರುವುದು ಕೂಡ ಹೆಚ್ಚಾಗುತ್ತಿದೆ, ಇದು ಅಪಘಾತಕ್ಕೆ ಕೂಡ ಕಾರಣವಾಗುತ್ತಿದ್ದು,ಈಗಾಗಲೇ ಕೇರಳ ರಾಜ್ಯದಲ್ಲಿ ಈ ಬಗ್ಗೆ ಕಾನೂನು ಕೂಡ ಇದೇ. ಇನ್ನೂ ಹಲವು ಮಂದಿ ಹೆಲ್ಮೆಟ್‌ ಧರಿಸದೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಅಪ್‌ಲೋಡ್‌ ಮಾಡುತ್ತಿದ್ದರು ಕೂಡ ಪೋಲಿಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿದೆ. ಕೆಲವು ತಿಂಗಳ ಹಿಂದೆ ಮಂಡ್ಯ ಮೂಲದ ದರ್ಶನ್‌ ಎನ್ನುವ ಯುವಕನಿಗೆ ಪೋಲಿಸರು ಸಂಚಾರಿ ನಿಯಮದ ಅಡಿಯಲ್ಲಿ ದಂಡವನ್ನು ವಿಧಿಸಿದ್ದರು, ಆದರೆ ಆ ಹುಡುಗ ಈಗ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದು, ತನ್ನ ಸ್ನೇಹಿತರ ಜೊತೆಗೆ ಪೋಲಿಸರ ಭಯವಿಲ್ಲದೇ ಸಂಚಾರಿ ನಿಯಮವನ್ನು ಉಲ್ಲಂಘಿಸಿ ರಿಲ್‌ ಮಾಡುತ್ತಿದ್ದಾನೆ ಅಂತ ಸ್ಥಳೀಯ ಜನತೆ ಆರೋಪಿಸಿದ್ದಾರೆ. ಇದಲ್ಲದೇ ಅನೇಕ ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ರೀಲ್ಸ್‌ ಮಾಡಿ, ಓಡಾಡುವ ಜನತೆಗೂ ಕೂ ತೊಂದ್ರೆ ನೀಡುವುದನ್ನು ಕಾಣಬಹುದಾಗಿದೆ. ಇದು ಕೂಡ ಜನತೆಯಲ್ಲಿ ಬೇಸರ ಮೂಡಿಸಿದೆ.