ರಾಜ್ಯ ಸರ್ಕಾರದಿಂದ 'ಕರ್ನಾಟಕ ಪಬ್ಲಿಕ್ ಶಾಲೆ'ಯ 58 ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಮಂಜೂರಾತಿ

ರಾಜ್ಯ ಸರ್ಕಾರದಿಂದ 'ಕರ್ನಾಟಕ ಪಬ್ಲಿಕ್ ಶಾಲೆ'ಯ 58 ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಮಂಜೂರಾತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇದ್ದಂತ 58 ಮುಖ್ಯೋಪಾಧ್ಯಾಯರ ವೃಂದದ ಹುದ್ದೆಗಳಿಗೆ ಮಂಜೂರಾತಿ ನೀಡಿದೆ. ಇದಲ್ಲದೇ 279 ಬೋಧಕೇತರ ವೃಂದದ ಹುದ್ದೆಗಳನ್ನು ರದ್ದುಗೊಳಿಸಿ ಆದೇಶಿಸಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು, ಉಪ ಪ್ರಾಂಶುಪಾಲರು ವೃಂದದ 58 ಹುದ್ದೆಗಳನ್ನು ಸೃಜಿಸಲು ಬೋಧಕೇತರ ವೃಂದದ 279 ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಸರ್ಕಾರದ ಪತ್ರದಲ್ಲಿ ಆದೇಶಿಸಲಾಗಿದೆ ಎಂದಿದ್ದಾರೆ.

50 ಶೀಘ್ರಲಿಪಿಗಾರರು, 29 ಹಿರಿಯ ಬೆರಳಚ್ಚುಗಾರರು, 100 ದ್ವಿತೀಯ ದರ್ಜೆ ಸಹಾಯಕ, 50 ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, 50 ಬೆರಳಚ್ಚುಗಾರರು ಸೇರಿದಂತೆ 279 ಬೋಧಕೇತರ ವೃಂದದ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.ಇನ್ನೂ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರ 58 ಹುದ್ದೆಗಳನ್ನು ಸೃಜಿಸಲು ಅನುಮತಿ ನೀಡಿರೋದಾಗಿ ಹೇಳಿದ್ದಾರೆ.