ರಾಜ್ಯ ಕಾಂಗ್ರೆಸ್‌ ನಾಯಕರಿಗೆ ದೆಹಲಿ ಹೈಕಮಾಂಡ್‌ ಎಚ್ಚರಿಕೆ.

ರಾಜ್ಯ ಕಾಂಗ್ರೆಸ್‌ ನಾಯಕರಿಗೆ ದೆಹಲಿ ಹೈಕಮಾಂಡ್‌ ಎಚ್ಚರಿಕೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಪ್ರಚಾರದ ಭರಾಟೆ ಜೋರಾಗಿದೆ.

ಇದೀಗ ಕೇಂದ್ರ ನಾಯಕರು ಕೂಡ ರಾಜ್ಯಕ್ಕೆ ಭೇಟಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.

ಚುನಾವಣೆ ಹತ್ರ ಬರುತ್ತಿದಂತೆ ರಾಜ್ಯದಲ್ಲಿ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದಾರೆ. ಈ ನಡುವೆಯೇ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ದೆಹಲಿ ಹೈಕಮಾಂಡ್‌ ಎಚ್ಚರಿಕೆ ನೀಡಿದ್ದಾರೆ.

ಹೌದು ಚುನಾವಣೆ ಹತ್ರ ಬರುತ್ತಿದ್ದಂತೆ ದೆಹಲಿ ಹೈಕಮಾಂಡ್‌ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ವೇಳೆ ಫೋನ್‌ ಟ್ಯಾಂಪಿಗ್‌ ನಡೆಯುತ್ತದೆ ಎಚ್ಚರಕೆಯಿಂದ ಇರಿ ಎಂದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಸೂಚನೆ ನೀಡಿದ್ದಾರೆ. ಯಾವುದೇ ರಹಸ್ಯ ವಿಚಾರಗಳನ್ನು ಫೋನ್‌ ನಲ್ಲಿ ಮಾತನಾಡಬೇಡಿ. ಪ್ರಮುಖ ವಿಚಾರಗಳ ಕುರಿತು ಮೊಬೈಲ್‌ ನಲ್ಲಿ ಪ್ರಸ್ತಾಪ ಮಾಡಬೇಡಿ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ , ಬಿ.ಕೆ ಹರಿಪ್ರಸಾದ್‌, ಎಂ. ಬಿ ಪಾಟೀಲ್‌ ಸೇರಿದಂತೆ ಹಲವರಿಗೆ ಹೈಕಮಾಂಡ್‌ ಸೂಚನೆ ನೀಡಿದ್ದಾರೆ. ಚುನಾವಣೆ ಸಂಧರ್ಭದಲ್ಲಿ ಫೋನ್‌ ಟ್ಯಾಪಿಂಗ್‌ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಎಂ.ಬಿ ಪಾಟೀಲ್‌ ಅವರ ಸಿಡಿಆರ್‌ ಬಯಲು ಆಗಿತ್ತು. ಈ ಪ್ರಕರಣದ ಬಳಿಕ ಹೈಕಮಾಂಡ್‌ ಎಚ್ಚರಿಕೆ ನೀಡಿದ್ದಾರೆ.