ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇಗೆ ಕಾಮನ್ ಡಿಪಿ ಅನಾವರಣ

ರಾಕಿಂಗ್ ಸ್ಟಾರ್ ಯಶ್ ಅವರು ಭಾನುವಾರ (ಜ.8) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಕುಟುಂಬದ ಜೊತೆ ದುಬೈಗೆ ಹಾರಿದ್ದಾರೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಕಾಮನ್ ಡಿಪಿ ಅನಾವರಣಗೊಂಡಿದೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಈ ಫೋಟೋವನ್ನು ಪ್ರೊಫೈಲ್ ಪಿಕ್ಚರ್‌ಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಯಶ್ ಹಡಗಿನ ಮೇಲೆ ನಿಂತಿದ್ದಾರೆ. ಹಡಗಿಗೆ ಬಾಸ್ ಎಂದು ಬರೆಯಲಾಗಿದೆ. ಈ ಫೋಟೋ ಕೆಜಿಎಫ್-2 ಥೀಮ್‌ನಲ್ಲಿ ಮೂಡಿಬಂದಿದೆ.