ಯಡಿಯೂರಪ್ಪರಿಗೆ ಬಿಜೆಪಿ ಬಗ್ಗೆ ಅಪಾರ ಕಾಳಜಿ, ಅಭಿಮಾನವಿದೆ: ಅಶ್ವಥ್ ನಾರಾಯಣ್

ಮಂಡ್ಯ: ಬಿಜೆಪಿ ಬಿಎಸ್ ವೈಗೆ ಕಣ್ಣೀರು ಹಾಕಿಸಿದೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಪಕ್ಷ ಬೆಳೆಸುವ ಜೊತೆಗೆ ಅವರು ಬೆಳೆದು ನಾಯಕರಾಗಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಪಕ್ಷದಲ್ಲಿ ಜಾಗ ಸಿಗ್ತಿಲ್ಲ.ಕುರ್ಚಿ ಎಳೆದುಕೊಂಡು ಕುಳಿತಿದ್ದಾರೆ.ಕಾಂಗ್ರೆಸ್ ನವರಿಗೆ ಬಿಎಸ್ ವೈಗೆ ಬಗ್ಗೆ ಮಾತನಾಡೋಕೆ ಯಾವ ನೈತಿಕತೆ, ಮೌಲ್ಯ ಇಲ್ಲ. ಕಾಂಗ್ರೆಸ್ ನವರು ಸಮಾಜ ಹೊಡೆಯುವ ಕೆಲಸ ಮಾಡ್ತಾರೆ.ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಯಡಿಯೂರಪ್ಪ ಎಲ್ಲಿಯಾದರು ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ವಿರುದ್ದ ಸುರ್ಜೇವಾಲ ಭ್ರಷ್ಟಚಾರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಾಯಕರ ವಿರುದ್ದ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.ಪಾತಾಳದಿಂದ ಆಕಾಶದವರೆಗೆ ಭ್ರಷ್ಟಚಾರ ಮಾಡಿರುವ ಪಕ್ಷ ಕಾಂಗ್ರೆಸ್.ಸಿಕ್ಕ ಸಿಕ್ಕಲ್ಲಿ ದುಡ್ಡು ಮಾಡಿಕೊಳ್ಳೋರಿಗೆ ನೈತಿಕತೆ ಇದ್ಯಾ?ನಾನು ಹಿಂದು, ಆದ್ರೆ ಹಿಂದು ವಿರೋಧಿ ಅಂತಾರೆ.ಅವರಿಗೆ ಏನಾದ್ರು ಸ್ಪಷ್ಟತೆ ಇದಿಯಾ.?ನಮ್ಮ ಜನರ ಹಾಗೂ ರಾಜ್ಯವನ್ನ ಕಾಂಗ್ರೆಸ್ ಪಕ್ಷದಿಂದ ಕಾಪಾಡುವುದು ನಮ್ಮ ಕರ್ತವ್ಯ ಎಂದರು.