ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸ ಹೆಸರನ್ನು ಇಟ್ಟ ಸಿ.ಟಿ ರವಿ!

ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸ ಹೆಸರನ್ನು ಇಟ್ಟ ಸಿ.ಟಿ ರವಿ!

ಚಿಕ್ಕಮಗಳೂರು: ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್​ ಎಂದು ಕರೆದು ಟೀಕೆಗೆ ಒಳಗಾಗಿದ್ದ ಸಿ.ಟಿ ರವಿ ಈಗ ಸಿದ್ದುಗೆ ಹೊಸ ನಾಮಕರಣ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಪ್ರಧಾನ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಈಗ ಸಿದ್ದರಾಮಯ್ಯಗೆ ಹೊಸ ನಾಮಕರಣ ಮಾಡಿದ್ದು ಸುಳ್ಳು ರಾಮಯ್ಯ ಎಂದು ಕರೆದಿದ್ದಾರೆ.

'ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸುಳ್ಳು ರಾಮಯ್ಯ ಅನ್ನೋದು ಸೂಕ್ತ ಪದವಾಗುತ್ತೇ. ಬಾಯಿ ಬಿಟ್ಟರೆ ಸುಳ್ಳು. ಜನ ಇಟ್ಟಿದ್ದು ಸಿದ್ರಾಮುಲ್ಲಾ ಖಾನ್ ಅಂತ. ನಾನು ಇಟ್ಟಿರುವ ಹೆಸರು ಸುಳ್ಳುರಾಮಯ್ಯ ಎಂದು' ಎಂದಿದ್ದಾರೆ.ಸಾರ್ವಕರ್, ಹಿಟ್ಲರ್​ನಿಂದ ಪ್ರಬಾವಿತರಾದವರು ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇತ್ತೀಚಿಗೆ ಸಿದ್ದರಾಮಯ್ಯ ಅವರು ಮಾತನಾಡುತ್ತಾ ಇರೋದು ನೋಡಿದರೆ ಅವರ ಮಾನಸಿಕ ಆರೋಗ್ಯದ ಬಗ್ಗೆ ಸಂಶಯ ಶುರುವಾಗಿದೆ. ಇಂದಿರಾಗಾಂಧಿ ಕಾಲದಲ್ಲಿ ಸಾರ್ವಕರ್ ಹೆಸರಿನಲ್ಲಿ ಅಂಚೆ ಚೀಟಿ ತಂದಿದ್ದಾರೆ. ಹಿಟ್ಲರ್ ಹೆಸರಿನಲ್ಲಿ ಅವರು ಅಂಚೆ ಚೀಟಿ ತಂದಿದ್ದರೆ ಸಿದ್ದರಾಮಯ್ಯ ದೇಶಭಕ್ತಿ ಸಂಘಟನೆಗಳನ್ನು ದೂರೋದು, ಇಸ್ಲಾಂ ರಾಷ್ಟ್ರ ಮಾಡಬೇಕು ಎಂದು ಬಯಸುವ ಎಸ್​ಡಿಪಿಐ ಸಂಘಟನೆಗಳನ್ನು ಆಲಂಗಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ.

ಮೈಸೂರು ಸಂಸ್ಥಾನ ಮೀಸಲಾತಿ ಕೊಟ್ಟು ಅಭಿವೃದ್ಧಿ ಮಾಡಲು ಯೋಜನೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಇವರು ನೆನಪಿಸಿಕೊಳ್ಳೋದಿಲ್ಲ. ಅವರು ಕನ್ನಡದ ಅಡಳಿತ ಭಾಷೆಯ ಬದಲಿಗೆ ಪರ್ಷಿಯನ್ ಭಾಷೆಯನ್ನ ಹೇರಿದ ಟಿಪ್ಪುವನ್ನು ನೆನಪಿಸಿಕೊಳ್ಳುತ್ತಾರೆ. ಇದೆಲ್ಲವೂ ನೋಡಿದಾಗ ಏನು ಅನ್ನಿಸುತ್ತದೆ ಎನ್ನುವುದನ್ನು ನಿಮ್ಮ ತಿರ್ಮಾನಕ್ಕೆ ಬಿಟ್ಟಿದ್ದೇನೆ.

ಜಿನ್ನಾ ಏನಾದ್ರೂ ಬದುಕಿದ್ರೆ ಸಿದ್ದರಾಮಯ್ಯ ಅವರನ್ನು ನೋಡಿ 'ಯಾರೋ ನನಗೆ ಕಟ್ಟರ್ ಕಾಂಪಿಟೇಟರ್ ಇದ್ದಾನೆ' ಎಂದು ಜಿನ್ನಾಗೆ ಅನಿಸುತ್ತಿತ್ತು. ಜಿನ್ನಾನನ್ನು ಮೀರಿಸುವ ರೀತಿ ನಡುವಳಿಕೆ ಇದ್ದೇ ಸಿದ್ದರಾಮಯ್ಯ ಅವರದ್ದು. ಅವರ ನಡುವಳಿಕೆ ಜಿನ್ನಾ ಮಾನಸಿಕತೆಯ ನಡುವಳಿಕೆ' ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿ ಹೊಸ ಬಾಂಬ್​ ಸಿಡಿಸಿದ್ದಾರೆ.