ಬೆಂಗಳೂರಿನ ಮಹಿಳೆಯರ ಗಮನಕ್ಕೆ: ಮಾ.8ರಂದು ಎಲ್ಲಾ 'ಬಿಎಂಟಿಸಿ ಬಸ್'ನಲ್ಲಿ ಉಚಿತ ಪ್ರಯಾಣಿಸಲು ಅವಕಾಶ

ಬೆಂಗಳೂರಿನ ಮಹಿಳೆಯರ ಗಮನಕ್ಕೆ: ಮಾ.8ರಂದು ಎಲ್ಲಾ 'ಬಿಎಂಟಿಸಿ ಬಸ್'ನಲ್ಲಿ ಉಚಿತ ಪ್ರಯಾಣಿಸಲು ಅವಕಾಶ

ಬೆಂಗಳೂರು: ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಅದು ಬೆಂಗಳೂರಿನ ಬಿಎಂಟಿಸಿಯ ಎಲ್ಲಾ ಬಸ್ಸುಗಳಲ್ಲಿ ( BMTC Bus ) ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಬಿಎಂಟಿಸಿಯಲ್ಲಿ 48 ಘಟಕಗಳು, 50 ಬಸ್ ನಿಲ್ದಾಣಗಳು ಹಾಗೂ 6600 ವಾಹನಗಳ ಬಲ ಹೊಂದಿದೆ.

ಪ್ರತಿ ದಿನ 5567 ಬಸ್ಸುಗಳಿಂದ 54 ಸಾವಿರ ಸುತ್ತುವಳಿಗಳೊಂದಿಗೆ 10.84 ಲಕ್ಷ ಕಿಲೋಮೀಟರ್ ಗಳನ್ನು ಕ್ರಮಿಸಿ ಸರಾಸರಿ 29 ಲಕ್ಷ ಪ್ರಯಾಣಿಕರಿಗೆ ಬೇಡಿಕೆಗಳಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದೆ ಎಂದು ತಿಳಿಸಿದೆ.

ಮಾರ್ಚ್ 8, 2023ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆ ದಿನದಂದು ಬೆಂಗಳೂರು ನಗರದ ಮಹಿಳೆಯರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿ ಎಂದು ಹೇಳಿದೆ.

ವಿಶ್ವ ಮಹಿಳಾ ದಿನಾಚರಣೆಯಂದು ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಎಲ್ಲಾ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದಲ್ಲಿ, ಸಂಸ್ಥೆಗೆ ಅಂದಾಜು ರೂ.8.17 ಕೋಟಿ ವೆಚ್ಚ ಉಂಟಾಗಬಹುದೆಂದು ಅಂದಾಜಿಸಲಾಗಿದೆ ಎಂದಿದೆ.

ವರದಿ: ವಸಂತ ಬಿ ಈಶ್ವರಗೆರೆ