ಬೆಂಗಳೂರಲ್ಲಿ ಘೋರ ದುರಂತ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿಯ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.
ಹಣಕಾಸಿನ ವಿಚಾರಕ್ಕೆ ಸ್ನೇಹಿತರೇ ಲಿಯಾಖತ್ ಅಲಿಖಾನ್ (44) ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸ್ನೇಹಿತರಾದ ವಾಸೀಂ ಮತ್ತು ಜೋಹರ್ ಕೊಲೆ ಮಾಡಿರುವುದಾಗಿ ಆರೋಪ ಕೇಳಿ ಬರುತ್ತಿದೆ.
ರಾತ್ರಿ ಜಿಮ್‌ಗೆ ಹೋಗಿದ್ದ ಯುವಕ ಮನೆ ಬಾರದ ವೇಳೆ ಆತಂಕಗೊಂಡ ಮನೆಯವರು ಅಲಿಖಾನ್‌ನನ್ನು ಕುಟುಂಬಸ್ಥರು ಹುಡುಕಾಡಿದ್ದಾರೆ. ಬಳಿಕ ಬೆಳಗಿನ ಜಾವ ಮತ್ತೊಂದು ಮನೆಯಲ್ಲಿ ಆತನ ಶವ ಪತ್ತೆಯಾಗಿದ್ದು ಬೆಚ್ಚಿಬಿದ್ದಿದ್ದಾರೆ. ಬಳಿಕ ಕೂಡಲೇ ಮರಣೋತ್ತರ ಪರೀಕ್ಷೆಗೆ ಶವವನ್ನು ರವಾನಿಸಿದ್ದಾರೆ. ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ತನಿಖೆಗಾಗಿ ಪೊಲೀಸರಿ ತನಿಖೆ ಮುಂದುವರಿಸಿದ್ದಾರೆ.