ಬೆಂಗಳೂರಲ್ಲಿ ಖತರ್ನಾಕ್‌ ಕಳ್ಳನ ಎಂಟ್ರಿ : ʼಬೈಕ್​ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ

ಬೆಂಗಳೂರಲ್ಲಿ ಖತರ್ನಾಕ್‌ ಕಳ್ಳನ ಎಂಟ್ರಿ : ʼಬೈಕ್​ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕಳ್ಳರಿಗೇನು ಕಮ್ಮಿಯಿಲ್ಲ, ಇದೀಗ ಬೈಕ್​ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನುಸಿದ್ದಾಪುರ ಪೊಲೀಸರಿಂದ ಬಂಧಿಸಲಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಿಲ್ಲಿ ಪಾರ್ಕಿಂಗ್‌ ಇಲ್ಲದೇ ಅದೇಷ್ಟು ಜನರು ಮನೆ ಮುಂದೆ ಬೈಕ್‌ಗನ್ನು ನಿಲ್ಲಿಸುತ್ತಾರೆ. ಇದನ್ನೆ ಬಂಡಾವಳವನ್ನಾಗಿ ಮಾಡಿಕೊಂಡು ರಾತ್ರೋರಾತ್ರಿ ಕಳ್ಳತನ ಮಾಡಿ ಮಾರಾಟ ಮಾಡುವ ಹೊಸ ದಂಧೆಯನ್ನ ಶುರು ಮಾಡಿದ್ದನು.ಈತ ಬೆಂಗಳೂರಿನ ಸಿದ್ದಾಪುರ, ಕಲಾಸಿಪಾಳ್ಯ, ವರ್ತೂರು, ಚಂದ್ರಾಲೇಔಟ್, ಕೆ.ಎಸ್.ಲೇಔಟ್ ಸೇರಿ ಬೈಕ್‌ಗಳನ್ನ ಕಳ್ಳತನ ಮಾಡುತ್ತಿದ್ದನು, ಖತರ್ನಾಕ್‌ ಬೈಕ್‌ ಖದೀಮ ನಿತಿನ್​​​​​​(20) ಎಂದು ಗುರುತಿಸಲಾಗಿದೆ. ಈತನ್ನು ತನಿಖೆ ಬಳಿಕ ಬಂಧನ ಮಾಡಲಾಗಿದೆ. ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ ಹೋಂಡಾ ಡಿಯೋ, ಪಲ್ಸರ್ , ಆರ್ ಎಕ್ಸ್ ಬೈಕ್​ಗಳು ಸೇರಿ ಒಟ್ಟು 12 ದ್ವಿಚಕ್ರವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಪೊಲೀಸರ ಕಾರ್ಯಚರಣೆ ವೇಳೆ ಈತನ ವಿರುದ್ಧ ಈಗಾಗಲೇ ಹಲವು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.