ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಏ.15ರೊಳಗೆ ಕುಟುಂಬದ ಸ್ವಂತ ಮನೆ ಕಾಮಗಾರಿ ಪೂರ್ಣ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಏ.15ರೊಳಗೆ ಕುಟುಂಬದ ಸ್ವಂತ ಮನೆ ಕಾಮಗಾರಿ ಪೂರ್ಣ

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆಗೀಡಾದ ಯುವಕನ ಕುಟುಂಬದ ಸ್ವಂತ ಮನೆಯ ಕಾಮಗಾರಿಯೂಏ.15ರೊಳಗೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಒಬ್ಬನೆ ಮಗನಾಗಿದ್ದನು. ಈತನೆ ಮನೆಗೆ ಆಧಾರ ಸ್ಥಂಭವಾಗಿದ್ದು, ಮನೆ ಕಟ್ಟುವ ನಿರೀಕ್ಷೆಯನ್ನು ಹೊಂದಿದ್ದರು, ಮನೆ ಕಟ್ಟಲು ಪ್ಲಾನ್‌ ಮಾಡುತ್ತಿದ್ದಂತೆ ಮನೆಯ ಮಗನೇ ಹತ್ಯೆಗೀಡಾದನು. ಈತ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದನು. ಈತನ ಕೊಲೆಗೆ ರಾಜ್ಯದ ಜನರೇ ಬೇಸರಗೊಂಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದರು.ನ.2ರಂದು ಮನೆಗೆ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು 50 ಲಕ್ಷ ರು. ವೆಚ್ಚದ, 2,700 ಚದರ ಅಡಿ ವಿಸ್ತೀರ್ಣದ ಮನೆಯ ವಿನ್ಯಾಸ ಹಾಗೂ ಗುತ್ತಿಗೆಯನ್ನು ಮಂಗಳೂರಿನ ಮುಗೆರೋಡಿ ಕನ್‌ಸ್ಟ್ರಕ್ಷನ್‌ ವಹಿಸಿದೆ. ಈಗಾಗಲೇ ಭರದಿಂದ ಮನೆ ಕಾಮಗಾರಿ ನಡೆಸಲಾಗುತ್ತಿದ್ದು, ಜೂನ್‌ ಮಳೆಗಾಲದೊಳಗೆ ಮನೆಯ ಪ್ರವೇಶೋತ್ಸವನ್ನು ಮಾಡಲಿದ್ದಾರೆ. ಮನೆಯ ಮಗನನ್ನು ಕಳೆದುಕೊಂಡ ಕುಟಂಬಸ್ಥರು ಸದಾ ದುಃಖದ ಮಡುವಿನಲ್ಲೆ ಕಾಲ ಕಳೆಯುತ್ತಿದ್ದರು, ಇದೀಗಕೊಂಚ ಮಟ್ಟಿಗೆ ಮಗ ಪ್ರವೀಣ್‌ ನೆಟ್ಟಾರು ಹೆಸರಲ್ಲೇ ನೆಮ್ಮದಿ ಗೂಡು ಸಿದ್ದಗೊಳ್ಳುತ್ತಿರೋದ್ರಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದರೆ ತಪ್ಪಗಲಾರದು.

ಪ್ರವೀಣ್‌ ನೆಟ್ಟಾರು ಹತ್ಯೆ :

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು.

ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಈ ಬೆನ್ನಲ್ಲೆ ಕರಾವಳಿ ನಗರದೆಲ್ಲೆಡೆ ಬೂದಿ ಮುಚ್ಚಿದ ಕೆಂಡದಂತಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹತ್ಯೆ ಪ್ರಕರಣವನ್ನು ಆರೋಪಿಗಳ ಪತ್ತೆಗಾಗಿ ಎನ್‌ಐಎ ಗೆ ವಹಿಸಲಾಗಿತ್ತು. ಇದರ ಹಿಂದೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಕೈವಾಡವನ್ನು ಪತ್ತೆಯಾಗಿತ್ತು. ಪೊಲೀಸರ ನೆರವಿನಲ್ಲಿ 15ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ. ತಲೆಮರೆಸಿರುವ ಆರು ಮಂದಿ ಆರೋಪಿಗಳ ಬಂಧನಕ್ಕೆ ವಾರಂಟ್‌ ಕೂಡ ಹೊರಡಿಸಿದೆ