ಪ್ರಭಾವಿ ಮುಸ್ಲಿಂ ರಾಜಕಾರಣಿ ಜಮೀರ್‌ ಅಹ್ಮದ್‌ ವ್ಯಕ್ತಿಚಿತ್ರ

ಪ್ರಭಾವಿ ಮುಸ್ಲಿಂ ರಾಜಕಾರಣಿ ಜಮೀರ್‌ ಅಹ್ಮದ್‌ ವ್ಯಕ್ತಿಚಿತ್ರ

ಚಾಮರಾಜಪೇಟೆ  : ಚಾಮರಾಜಪೇಟೆ ಕ್ಷೇತ್ರದಲ್ಲಿ ಸಹಾಯ ಹಸ್ತವನ್ನು ಚಾಚುವ ಮೂಲಕ ತಮ್ಮದೇ ಆದ ಚಾಪು ಮೂಡಿಸಿರುವ ಮುಸ್ಲಿಂ ಸಮುದಾಯದ ಜಮೀರ್‌ ಅಹಮ್ಮದ್‌ ಖಾನ್‌ ಅವರ ವ್ಯಕ್ತಿಚಿತ್ರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಜಮೀರ್ ಅಹಮ್ಮದ್ ಖಾನ್ 4 ಬಾರಿ ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿದ್ದಾರೆ.

ಮತ್ತು ನ್ಯಾಷನಲ್ ಟ್ರಾವೆಲ್ಸ್‌ನ ವ್ಯವಸ್ಥಾಪಕರಾಗಿಯೂ ಪಾಲುದಾರರಾಗಿದ್ದಾರೆ.

ಜಮೀರ್ ಅಹಮ್ಮದ್ ಖಾನ್ ಅವರ ಆರಂಭಿಕ ಜೀವನವನ್ನು ನೋಡುವುದಾದರೆ, ನ್ಯಾಷನಲ್ ಟ್ರಾವೆಲ್ಸ್ ಅನ್ನು ಬಿಪಿ ಬಶೀರ್ ಅಹ್ಮದ್ ಖಾನ್ ಸ್ಥಾಪಿಸಿದರು. 1950ರ ದಶಕದ ಆರಂಭದಲ್ಲಿ ಅವರ ಮರಣದ ನಂತರ, ಅವರ ಹಿರಿಯ ಮಗ ಬಿ ಅತಾವುಲ್ಲಾ ಖಾನ್ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ನಂತರ ಅವರ ಸಹೋದರರಾದ ಬಿ. ಜಿಯಾವುಲ್ಲಾ, ಬಿ.ಸನಾವುಲ್ಲಾ, ಬಿ.ಅನ್ವರ್‌ವುಲ್ಲಾ, ಬಿ.ರಹಮತುಲ್ಲಾ, ಬಿ.ನೂರ್‌ವುಲ್ಲಾ ಮತ್ತು ಬಿ.ಸಿರಾಜ್‌ವುಲ್ಲಾ, ಬಿ.ಅತಾವುಲ್ಲಾ ಖಾನ್ ಮತ್ತು ಸಹೋದರರ ನೇತೃತ್ವದ ಮೂರನೇ ತಲೆಮಾರಿನವರು ಅವರ ಉತ್ತರಾಧಿಕಾರಿಯಾದರು.

ಜಮೀರ್ ಅಹಮ್ಮದ್ ವೃತ್ತಿಜೀನವ

ಜಮೀರ್‌ ಅಹಮ್ಮದ್‌ ಖಾನ್‌ ಅವರು, ವಿಧಾನಸಭೆಯ ಸದಸ್ಯ, ಸಂಪುಟ ಸಚಿವ, ಕರ್ನಾಟಕ ಪ್ರದೇಶ ಜನತಾ ದಳದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಹಾಗೆಯೇ ಹಜ್ ಮತ್ತು ವಕ್ಫ್ ಮಂಡಳಿಯ ಸಚಿವರಾಗಿದ್ದರು. ನಂತರ 2005ರಲ್ಲಿ ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ರಾಜ್ಯಪಾಲ ಸ್ಥಾನಕ್ಕಾಗಿ ಎಸ್‌.ಎಂ. ಕೃಷ್ಣ ಅವರು ಚಾಮರಾಜಪೇಟೆಯ ಸ್ಥಾನವನ್ನು ತೆರವುಗೊಳಿಸಿದರು.

V.Somanna Profile: ಪ್ರಭಾವಿ ಲಿಂಗಾಯತ ರಾಜಕಾರಣಿ ವಿ. ಸೋಮಣ್ಣನವರ ವ್ಯಕ್ತಿ ಚಿತ್ರಣ

ಜಮೀರ್ ಅಹಮ್ಮದ್ ರಾಜಕೀಯದ ಹಾದಿ

ಎಸ್‌.ಎಂ. ಕೃಷ್ಣ ಅವರ ಲೆಫ್ಟಿನೆಂಟ್ ಆರ್.ವಿ.ದೇವರಾಜ್ ಅವರನ್ನು ಸೋಲಿಸಿದ ಜಮೀರ್ ಅವರನ್ನು ನಂತರ ಕಣಕ್ಕಿಳಿಸಿತು. ನಂತರ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಹಜ್ ಮತ್ತು ವಕ್ಫ್ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. 25 ಮಾರ್ಚ್ 2018 ರಂದು, ಜಮೀರ್ ಜೆಡಿಎಸ್‌ ಪಕ್ಷದ ಇತರ 6 ಶಾಸಕರೊಂದಿಗೆ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಜಮೀರ್ ಕಾಂಗ್ರೆಸ್‌ ಸೇರಿದ್ದು ಹೇಗೆ?

ಜೆಡಿಎಸ್‌ನಿಂದ ಕಾಂಗ್ರೆಸ್‌ ಪಕ್ಷ ಸೇರಿಕೊಂಡ ಜಮೀರ್, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ಜಮೀರ್ ಅಹ್ಮದ್ ಖಾನ್ ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರ ಆಪ್ತರಾಗಿದ್ದರು. ಬೆಂಗಳೂರು ನಗರದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಲ್ಲಿ ಇವರು ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದರು.

ಇನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ತಮ್ಮ ರಾಜಕೀಯ ಗುರುಗಳು ಎಂದು ಜಮೀರ್ ಅಹ್ಮದ್ ಖಾನ್ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾಗಿ ನಿಯುಕ್ತಿಯಾದಾಗ ಚಾಮರಾಜಪೇಟೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಎದುರಾದ ಉಪ ಚುನಾವಣೆಯಲ್ಲಿ ದೇವೇಗೌಡರು ಜೆಡಿಎಸ್‌ನಿಂದ ಜಮೀರ್ ಅಹ್ಮದ್ ಖಾನ್‌ರನ್ನು ಕಣಕ್ಕಿಳಿಸಿದರು.

ಜೆಡಿಎಸ್‌ ಪಕ್ಷದಿಂದ ಗೆಲುವು

2008, 2013ರಲ್ಲಿ ಜೆಡಿಎಸ್‌ ಪಕ್ಷದಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಗೆಲುವು ಸಾಧಿಸಿದರು. 2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣದಿಂದ ಜಮೀರ್ ಅಹ್ಮದ್ ಖಾನ್ ಪಕ್ಷದಿಂದ ಅಮಾನತುಗೊಂಡರು. ಬಳಿಕ ಅವರು ಕಾಂಗ್ರೆಸ್ ಸೇರಿದರು.

2018ರ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್‌ಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತು. ಆಗ 65,339 ಮತಗಳನ್ನು ಪಡೆದು ಜಮೀರ್ ಅಹ್ಮದ್ ಖಾನ್ ಬಿಜೆಪಿಯ ಎಂ. ಲಕ್ಷ್ಮೀನಾರಾಯಣ್ ಸೋಲಿಸುವ ಮೂಲಕ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಜಮೀರ್ ಅಹ್ಮದ್‌ ವ್ಯವಹಾರದ ಜೀವನ

ರಾಜಕೀಯ ಹೊರತುಪಡಿಸಿ ಜಮೀರ್ ಅಹ್ಮದ್ ಖಾನ್ ಒಬ್ಬ ಉದ್ಯಮಿಯಾಗಿದ್ದಾರೆ. ಹಾಗೆಯೇ ನ್ಯಾಷನಲ್ ಟ್ರಾವೆಲ್ಸ್‌ನ ಪಾಲುದಾರರಾಗಿದ್ದಾರೆ. ಮತ್ತು ಬೆಂಗಳೂರಿನಲ್ಲಿ ಅವರು ಕಟ್ಟಿಸಿರುವ ಬೃಹತ್‌ ಬಂಗಲೆಯಂತಹ ಮನೆ ಹಲವು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈ ಐಷಾರಾಮಿ ಮನೆಯ ವಿಚಾರವಾಗಿಯೇ ಜಮೀರ್ ನಿವಾಸದ ಮೇಲೆ ಇಡಿ, ಎಸಿಬಿ ದಾಳಿಯೂ ಕೂಡ ನಡೆದಿದೆ.

ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಭಾರಿ ಪ್ರಭಾವಿಯಾಗಿದ್ದಾರೆ. 2015ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದಾಗ ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಮೇಯರ್ ಪಟ್ಟವನ್ನು ಬಿಜೆಪಿ ಕೈ ತಪ್ಪಿಸುವುದರ ಹಿಂದೆ ಜಮೀರ್ ಅಹ್ಮದ್ ಪ್ರಭಾವ ಕೆಲಸ ಮಾಡಿತ್ತು ಎನ್ನಲಾಗಿದೆ. ಹೀಗೆ ಜಮೀರ್‌ ಅಹಮ್ಮದ್‌ ಅವರ ವ್ಯಕ್ತಿಚಿತ್ರವನ್ನು ವಿವರಿಸಲಾಗಿದೆ.