ನ್ಯಾಟ್ ಸಿವರ್ ಬ್ರಂಟ್ ಭರ್ಜರಿ ಅರ್ಧಶತಕ: ಬೃಹತ್ ಮೊತ್ತ ಕಲೆಹಾಕಿದ ಮುಂಬೈ ಇಂಡಿಯನ್ಸ್

ನ್ಯಾಟ್ ಸಿವರ್ ಬ್ರಂಟ್ ಭರ್ಜರಿ ಅರ್ಧಶತಕ: ಬೃಹತ್ ಮೊತ್ತ ಕಲೆಹಾಕಿದ ಮುಂಬೈ ಇಂಡಿಯನ್ಸ್

ಹಿಳಾ ಪ್ರೀಮಿಯರ್ ಲೀಗ್‌ 2023ರ ಪ್ಲೇಆಫ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ಕಲೆಹಾಕಿದೆ. ನ್ಯಾಟ್ ಸಿವರ್ ಬ್ರಂಟ್ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಯಾಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 21 ರನ್ ಗಳಿಸಿದರೆ, ಹೇಳಿ ಮ್ಯಾಥ್ಯೂಸ್ 26 ಎಸೆತಗಳಲ್ಲಿ 26 ರನ್ ಗಳಿಸಿದರು.

ನಂತರ ಬಂದ ಆಲ್‌ರೌಂಡರ್ ನ್ಯಾಟ್ ಸಿವರ್ ಬ್ರಂಟ್ ಅಮೋಘ ಇನ್ನಿಂಗ್ಸ್ ಆಡಿದರು. 38 ಎಸೆತಗಳಲ್ಲಿ 9 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ ಅಜೇಯ 72 ರನ್ ಗಳಿಸಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ 15 ಎಸೆತಗಳಲ್ಲಿ 14 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ಅಮೆಲಿ ಕೆರ್ 19 ಎಸೆತಗಳಲ್ಲಿ 29 ರನ್ ಗಳಿಸಿದರೆ, ಪೂಜಾ ವಸ್ತ್ರಾಕರ್ 4 ಎಸೆತಗಳಲ್ಲಿ ಅಜೇಯ 11 ರನ್ ಸಿಡಿಸಿದರು.

ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕ್ಲಸ್ಟೋನ್ 2 ವಿಕೆಟ್ ಪಡೆದರೆ, ಪಾರ್ಶವಿ ಚೋಪ್ರಾ ಮತ್ತು ಅಂಜಲಿ ಸರ್ವಾಣಿ ತಲಾ 1 ವಿಕೆಟ್ ಪಡೆದರು. ಯುಪಿ ವಾರಿಯರ್ಸ್ ಫೈನಲ್ ಪ್ರವೇಶಿಸಬೇಕಾದರೆ 189 ರನ್‌ಗಳನ್ನು ಗಳಿಸಬೇಕಿದೆ.

ಉಭಯ ತಂಡಗಳ ಆಡುವ ಬಳಗ

ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂತಮಣಿ ಕಲಿತಾ, ಸೈಕಾ ಇಶಾಕ್.

ಯುಪಿ ವಾರಿಯರ್ಜ್: ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಶೆರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾ, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.