ದಪ್ಪ ಚರ್ಮದ ಸರ್ಕಾರದಿಂದ ಜನಸಾಮಾನ್ಯರ ಬದುಕು ದುರ್ಬರವಾಗಿದೆ' : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು : ಈ ದಪ್ಪ ಚರ್ಮದ ಸರ್ಕಾರದಿಂದ ಜನಸಾಮಾನ್ಯರ ಬದುಕು ದುರ್ಭರವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಸರ್ಕಾರಿ ನೌಕರರ ಪ್ರತಿಭಟನೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ.
ಇನ್ನೂ, ಬಡತನ ರೇಖೆ ಕೆಳಗಿದ್ದ 27 ಕೋಟಿ ಜನರನ್ನು UPA ಸರ್ಕಾರ ಮೇಲೆತ್ತಿದೆ. ಆದರೆ BJP ಮತ್ತೆ ಅವರನ್ನು ಬಡತನಕ್ಕೆ ತಳ್ಳಿ, ಸೌದೆ ಒಲೆ ಮೊರೆ ಹೋಗುವಂತೆ ಮಾಡಿದೆ. ಈಗ ಬಡವರು ಸಿಲಿಂಡರ್ಗೆ ಊದುಕಡ್ಡಿ, ಹಾರ ಹಾಕಿ ಪೂಜೆ ಮಾಡಬೇಕಾ? ಅಥವಾ ದುಡಿದ ಅರ್ಧ ಭಾಗವನ್ನು LPGಗೆ ಕೊಡಬೇಕಾ? ಹೆದರದಿರಿ; ಮಾಸಿಕ ₹2000 ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ಬರ್ತಿದೆ ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.