ತೇಜಸ್ವಿ ಕೆ.ನಾಗ್ ನಿರ್ದೇಶನದ ಚಿತ್ರದಲ್ಲಿ ಶಿವರಾಜ್ ಕುಮಾರ್

ಕನ್ನಡ ಕಿರುತೆರೆಯ ನಿರ್ದೇಶಕ ಮತ್ತು 'ಎಲ್ಲಿದ್ದೇ ಇಲ್ಲೀತನಕ' ಚಿತ್ರದ ನಿರ್ದೇಶಕ ತೇಜಸ್ವಿ ಕೆ.ನಾಗ್ ಇದೀಗ ಶಿವರಾಜ್ ಕುಮಾರ್ ಅವರಿಗಾಗಿ ಹೊಸ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದೊಂದು ಹೊಸ ರೀತಿಯ ಸಿನೆಮಾವಾಗಿದ್ದು, ಶಿವಣ್ಣನ ಲುಕ್ ಕೂಡ ಹೊಸದಾಗಿಯೇ ಇರಲಿದೆಯಂತೆ. ತಾರಾಗಣ, ತಂತ್ರಜ್ಞರ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.