ಡಿಕೆಶಿ ಕಟ್ಟಿ ಹಾಕಲು ಸಿದ್ದರಾಮಯ್ಯರಿಂದ ದತ್ತ ಆಡಿಯೋ ರಿಲೀಸ್! ಬಿಜೆಪಿ ಬಾಂಬ್

ಡಿಕೆಶಿ ಕಟ್ಟಿ ಹಾಕಲು ಸಿದ್ದರಾಮಯ್ಯರಿಂದ ದತ್ತ ಆಡಿಯೋ ರಿಲೀಸ್! ಬಿಜೆಪಿ ಬಾಂಬ್
ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಡುವಣ ಆರೋಪ,ಪ್ರತ್ಯಾರೋಪ, ಟೀಕೆಗಳು ತಾರಕಕ್ಕೇರಿದೆ. ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಡುವಣ ಆರೋಪ,ಪ್ರತ್ಯಾರೋಪ, ಟೀಕೆಗಳು ತಾರಕಕ್ಕೇರಿದೆ.
ಈ ಮಧ್ಯೆ ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ವೈಎಸ್ ದತ್ತ ಅವರದು ಎನ್ನಲಾದ ಆಡಿಯೋವೊಂದು ರಿಲೀಸ್ ಆಗಿದೆ.ಇದರಲ್ಲಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿರುವ ವೈಎಸ್ ವಿ ದತ್ತ, ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.ಈ ಆಡಿಯೋ ಕುರಿತು ವಾಹಿನಿಯೊಂದರ ವರದಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕಲು ವಿಪಕ್ಷ ನಾಯಕ ಸಿದ್ದರಾಮಯ್ಯ ದತ್ತ ಅವರ ಆಡಿಯೋ ರಿಲೀಸ್ ಮಾಡಿಸಿದ್ದಾರೆ ಎಂದು ತಿಳಿದುಬಂದಿರುವುದಾಗಿ ಹೇಳಿದೆ.