ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: ಜಗತ್ತಿನೆಲ್ಲೆಡೆ ಕನ್ನಡ ಹಾಡುಗಳದೇ ಕಂಪನ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಕಣ ಕಣದಲ್ಲೂ ಕಂಪನ ಸೃಷ್ಟಿಸಿದೆ.ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಅಭೂಪೂರ್ವ ಕಾರ್ಯಕ್ರಮ ಇಡೀ ನಾಡನ್ನ ಒಂದೇ ಸ್ವರದಡಿ ತಂದು ನಿಲ್ಲಿಸಿದೆ. ವಿಧಾನಸೌಧದ ಮೆಟ್ಟಿನಿಂದ ಸರ್ಕಾರಿ ಶಾಲೆಯ ಹೊಸ್ತಿಲವರೆಗೆ , ಏರ್‌ ಪೋರ್ಟ್‌ ಅಂಗಳದಿಂದ ಸಾಗರದ ಅಲೆಗಳ ನಡುವಿನವರೆಗೆ ಎಲ್ಲೆಡೆ ಕನ್ನಡ ಗಾನ ಮೊಳಗಿತ್ತು. ಇದು ಕೋಟಿ ಕಂಠ ಗಾಯನವಾದರೂ ಈಗಾಗಲೇ 1.125 ಕೋಟಿ ಮಂದಿ ನೋಂದಣಿ ಮಾಡಿಕೊಂಡು ಹಾಡಿದ್ದಾರೆ.