ಕಾಂಗ್ರೆಸ್ ಸೇರುವುದು, ಭಿನ್ನಮತ ಮುಗಿದ ಅಧ್ಯಾಯ-ಸಚಿವ ವಿ.ಸೋಮಣ್ಣ

ಕಾಂಗ್ರೆಸ್ ಸೇರುವುದು, ಭಿನ್ನಮತ ಮುಗಿದ ಅಧ್ಯಾಯ-ಸಚಿವ ವಿ.ಸೋಮಣ್ಣ

ಸೋಮಣ್ಣ ಯಾವ ಪಕ್ಷ ಸೇರುತ್ತಾರೆ ಎನ್ನುವುದನ್ನು ತಿಳಿಯಲು ಹಲವು ಪಕ್ಷಗಳು ಕಾಯುತ್ತಿವೆ. ಆದರೆ ಸೋಮಣ್ಣನ ನಡೆ ರಹಸ್ಯವಾಗಿದೆ. ಅವರು ಪಕ್ಷ ಸೇರುವುದರ ಕುರಿತು ಸಿಎಂ. ಬೊಮ್ಮಾಯಿ ಅವರು ಬಿಜೆಪಿಯಲ್ಲಿಯೇ ಇರುತ್ತಾರೆ ಎಂದು ಭರವಸೆ ಮಾತುಗಳನ್ನಾಡಿದ್ದರು ಆದರೆ ಸೋಮಣ್ಣ ಡಿ.ಕೆ.ಶಿವಕುಮಾರ ಅವರ ಜೊತೆಗಿರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎರಡು ತಿಂಗಳಿನಿಂದ ನನ್ನನ್ನು ಉಜ್ಜುತ್ತಿದ್ದೀರಾ, ಇನ್ನು ಎಷ್ಟು ಬೇಕಾದ್ರೂ ಹಾಕಿಕೊಳ್ಳಿ ಅವೆಲ್ಲಾ ನನ್ನ ತಲೆಯಲ್ಲೇ ಇಲ್ಲಾ, ನಾನೋರ್ವ ಡೈರೆಕ್ಟ್ ರಾಜಕಾರಣಿ ನೇರವಾಗಿ ಮಾತನಾಡುವನು, ಈಗಾಗಲೇ ಅದರ ಬಗ್ಗೆ ಹೇಳುವುದನ್ನೆಲ್ಲಾ ಹೇಳಿದ್ದೇನೆ, ಅವೆಲ್ಲಾ ಮುಗಿದ ಅಧ್ಯಾಯ, ಇನ್ನು ಈ ವಿಚಾರಗಳಿಗೆ ಉತ್ತರಿಸಲ್ಲ ಎಂದರು.

ಇನ್ನು, ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜ್ಯದ 224 ಕ್ಷೇತ್ರಗಳಲ್ಲಿ ಸೋಮಣ್ಣಗೆ ಹಲವಾರು ಕ್ಷೇತ್ರ ಪರಿಚಯ ಇದೆ, ಚಿಕ್ಕಂದಿನಿಂದಲೂ ಚಾಮರಾಜನಗರದ ಬಗ್ಗೆ ವಿಶೇಷ ಪ್ರೀತಿ ಅಷ್ಟೇ, ಎಲ್ಲವೂ ಪಾರ್ಟಿಯ ತೀರ್ಮಾನ ಎಂದರು.