ಕರ್ನಾಟಕ ಚುನಾವಣೆ: ಮತ್ತೆ ಕನಕಪುರದಿಂದಲೇ ಡಿ.ಕೆ ಶಿವಕುಮಾರ್ ಕಣಕ್ಕೆ

ಬೆಂಗಳೂರು, ಮಾರ್ಚ್. 25: ಮುಂಬರುವ ಏಪ್ರಿಲ್ ಮೇನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದೆ. ಕನಕಪುರ ಕ್ಷೇತ್ರದಿಂದ ನಿರೀಕ್ಷೆಯಂತೆ ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ.
ಈ ಬಾರಿ ಹೆಚ್ಚು ಸುದ್ದಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದ ಗೊಂದಲಕ್ಕೆ ಈ ಪಟ್ಟಿ ಮತ್ತಷ್ಟು ಗೊಂದಲ ಸೃಷ್ಟಿಸುವಂತಿದೆ. ಸಿದ್ದರಾಮಯ್ಯ ಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಕೋಲಾರ ಮತ್ತು ಬಾದಾಮಿ ಕ್ಷೇಥ್ರಗಳಿಗೆ ಇನ್ನೂ ಅಭ್ಯರ್ಥಿ ಯಾರು ಎಂದು ಗೊತ್ತಿಲ್ಲ. ಈ ಕಾರಣದಿಂದಿ ಸಿದ್ದರಾಮಯ್ಯ ಅವರ ಕ್ಷೇತ್ರ ಯಾವುದು ಎಂದು ಇನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
ವಿಧಾನಸಭಾ ಚುನಾವಣೆಗೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಪಕ್ಷದ ಮುಖಂಡ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಹಿನ್ನಲೆಯಲ್ಲಿ ಪಟ್ಟಿ ಬಿಡುಗಡೆ ವಿಳಂಬವಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಕೊನೆಗೂ ಕೆಪಿಸಿಸಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಭಾಗಗಳಲ್ಲಿ ಹಾಲಿ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೆಟ್ ಹಂಚಿಕೆ ಮಾಡಿದ್ದಾರೆ.
ಇನ್ನು, ಕನಕಪುರ ವಿಧಾನಸಭಾ ಕ್ಷೇತ್ರ ವಿಂಗಡಣೆಯಾದ ನಂತರದಿಂದಲೂ ಇಲ್ಲಿ ಡಿ.ಕೆ. ಶಿವಕುಮಾರ್ ಸೋಲಿಲ್ಲದ ಸರದಾರ. ಇಷ್ಟೇಯಲ್ಲ ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಈವರೆಗೆ ಡಿ.ಕೆ. ಶಿವಕುಮಾರ್ ಆಯ್ಕೆಯಾಗುತ್ತ ಬಂದಿದ್ದು, ಸತತವಾಗಿ ಗೆಲುವು ಪಡೆಯುತ್ತಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಮತ್ತೆಂದೂ ಸೋಲು ಕಂಡಿಲ್ಲ. ಹೀಗಾಗಿ ಕನಕಪುರ ಡಿಕೆಶಿ ಭದ್ರಕೋಟೆಯಾಗಿದೆ. ಈ ಬಾರಿಯೂ ಇಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವವರಲ್ಲಿ ಡಿಕೆ. ಶಿವಕುಮಾರ್ ಕೂಡ ಒಬ್ಬರು. ಪಟ್ಟಿ ಬಿಡುಗಡೆಗೂ ಮುನ್ನವೇ ಹಲವು ವೇದಿಕೆಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿದ್ದವು. ಇಂತಹದ್ದೇ ಒಂದು ಸಮೀಕ್ಷೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಕೆ. ಶಿವಕುಮಾರ್‌ಗೆ ಭರ್ಜರಿ ಗೆಲುವು ದೊರೆಯಲಿದೆ ಎಂದು ವರದಿ ಮಾಡಿದೆ.
ಲೋಕ್ ಪೋಲ್ (Lok Poll) ಮಾರ್ಚ್ 10ರಂದು ಸಮೀಕ್ಷೆ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದೆ. ಈ ಸಮೀಕ್ಷೆಯ ಪ್ರಕಾರ 116 ರಿಂದ 122 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಆಡಳಿತಾರೂಢ ಬಿಜೆಪಿಯು 77 ರಿಂದ 83 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ 21 ರಿಂದ 27 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ತಿಳಿಸಿದೆ. ಈಗ ರಾಜ್ಯದ 10 ಪ್ರಮುಖ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂದು ಸಮೀಕ್ಷೆ ನಡೆಸಿ, ಅದರ ಫಲಿತಾಂಶ ಬಿಡುಗಡೆ ಮಾಡಿದೆ. ಅದರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂದಿದೆ.
ಈ ಸಮೀಕ್ಷೆ ಪ್ರಕಾರ ಡಿಕೆ ಶಿವಕುಮಾರ್ ಅವರಿಗೆ ಈ ಕನಕಪುರದ ಭದ್ರಕೋಟೆಯಲ್ಲಿ ಯಾವುದೇ ಬಿರುಕುಗಳು ಇಲ್ಲ. ಅವರು ಶೇಕಡಾ 70 ರಷ್ಟು ಮತ ಪಡೆದು ಜಯಶಾಲಿಯಾಗಲಿದ್ದಾರೆ ಎಂದಿದೆ. ಈ ಭಾಗದಲ್ಲಿ ಕಾಂಗ್ರೆಸ್‌ಗೆ ಎದುರಾಳಿಯಾಗಿರುವ ಜೆಡಿಎಸ್ ಶೇಕಡಾ 25, ಬಿಜೆಪಿ ಶೇಕಡಾ 04, ಇತರರು ಶೇಕಡಾ 01 ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಡಿಕೆ ಶಿವಕುಮಾರ್ ಅವರ ಗೆಲುವಿಗೆ ಕಾರಣವಾಗಬಲ್ಲ ಅಂಶಗಳಲ್ಲಿ ಮೊದಲನೆಯದು ಅವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು. ತಮ್ಮ ಭಾಗದ ಶಾಸಕ ಮುಖ್ಯಮಂತ್ರಿಯಾದರೇ ಕ್ಷೇತ್ರದ ಅಭಿವೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ ಇಲ್ಲಿನ ಜನ. ಇನ್ನೊಂದು ಅಂಶವೆಂದರೇ ಕನಕಪುರದಲ್ಲಿ ಡಿ.ಕೆ ಶಿವಕುಮಾರ್‌ಗೆ ಪ್ರಬಲ ವಿರೋಧ ಪಕ್ಷದ ಅಭ್ಯರ್ಥಿ ಇಲ್ಲದೇ ಇರುವುದು. ಇದು ಡಿಕೆ ಶಿವಕುಮಾರ್ ಅವರ ಕೋಟೆ ಎಂದೇ ಹೆಸರುವಾಸಿಯಾಗಿದ್ದು, ಅವರಿಗೆ ಈ ಕ್ಷೇತ್ರದಲ್ಲಿ ಎದುರಾಳಿಯಿಲ್ಲ.