ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಧಾರವಾಡ, ಕಲಘಟಗಿ, ಹುಬ್ಬಳ್ಳಿಯಲ್ಲಿ ವಿಶೇಷ ಉಪನ್ಯಾಸಕ್ಕಾಗಿ ದತ್ತಿನಿಧಿ ಸ್ಥಾಪನೆ.

ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಧಾರವಾಡ, ಕಲಘಟಗಿ, ಹುಬ್ಬಳ್ಳಿಯಲ್ಲಿ  ವಿಶೇಷ ಉಪನ್ಯಾಸಕ್ಕಾಗಿ ದತ್ತಿನಿಧಿ ಸ್ಥಾಪನೆ.

ಧಾರವಾಡ, ಡಿ.24: ಧಾರವಾಡ ವೀರಶೈವ ಜಂಗಮ ಸಂಸ್ಥೆಯು ವೀರಶೈವ ಧರ್ಮ, ಸಾಹಿತ್ಯ, ಸಂಶೋಧನೆ ಮತ್ತು ಬರವಣಿಗೆ ಹೆಚ್ಚಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕದಲ್ಲಿ ಪ್ರಸಕ್ತ ಸಾಲಿನಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲು ದತ್ತಿ ನಿಧಿ ಸ್ಥಾಪಿಸಲಾಗಿದೆ.
ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ ಭವನದಲ್ಲಿ ನಿನ್ನೆ ಸಂಜೆ (ಡಿ.23) ವೀರಶೈವ ಜಂಗಮ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರಿಗೆ ದತ್ತಿನಿಧಿ ಮೊತ್ತದ ಡಿಡಿಗಳನ್ನು ಹಸ್ತಾಂತರಿಸಿದರು.

ದತ್ತಿನಿಧಿ ಸ್ವಿಕರಿಸಿದ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿಯೂ ಕ್ರಿಯಾಶೀಲ ಬರಹಗಾರರನ್ನು, ಸಾಹಿತ್ಯ ಆಸಕ್ತರು, ಸಂಘಟಕರನ್ನು  ಮತ್ತು ಯುವ ಸಾಹಿತಿಗಳನ್ನು ಸಂಘಟಿಸಿ, ಸಾಹಿತ್ಯ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲಾ ಘಟಕದಲ್ಲಿ ಈಗಾಗಲೇ 80ಕ್ಕೂ ಹೆಚ್ಚು ದಾನಿಗಳು ಸಾಹಿತ್ಯ ಪ್ರಶಸ್ತಿ, ಉಪನ್ಯಾಸಗಳಿಗಾಗಿ ದತ್ತಿನಿಧಿ ಸ್ಥಾಪಿಸಿದ್ದಾರೆ. ಇದರಲ್ಲಿ ವ್ಯಕ್ತಿಗತ ಮತ್ತು ಸಂಘ, ಸಂಸ್ಥೆಗಳು ಸೇರಿವೆ.  ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಹೆಚ್ಚಳದಿಂದ ದತ್ತಿನಿಧಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನಮ್ಮನ್ನು ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಅನೇಕ ಧಾರ್ಮಿಕ ಸಾಹಿತ್ಯ ಕೃತಿಗಳ ರಚನೆಯಿಂದಾಗಿ  ಕನ್ನಡ ಸಾಹಿತ್ಯದ ಮೆರಗು ಹೆಚ್ಚಿದೆ. ಸಾಹಿತ್ಯಕ್ಕೂ ಧರ್ಮಕ್ಕೂ ಅವಿನಾಭವದ ಸಂಭಂದವಿದೆ. ವೀರಶೈವ ಜಂಗಮ ಸಂಸ್ಥೆಯ ದತ್ತಿನಿಧಿ ಆಶಯದಂತೆ ದತ್ತಿ ಉಪನ್ಯಾಸಗಳನ್ನು ಸಂಘಟಿಸಲಾಗುವುದು ಎಂದು ಡಾ.ಲಿಂಗರಾಜ ಅಂಗಡಿ ಹೇಳಿದರು. 

ದತ್ತಿನಿಧಿ ವಿವರ : ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 20 ನೇ ಪೀಠಾರೋಹಣದ ಸವಿನೆನಪಿಗಾಗಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದಲ್ಲಿ ವೀರಶೈವ ಧರ್ಮಕ್ಕೆ ಶಿವಾಚಾರ್ಯರ ಮತ್ತು ಶರಣರ ಕೊಡುಗೆಗಳು ಕುರಿತು ಪ್ರತಿ ವರ್ಷದ ಜನವರಿ ತಿಂಗಳಲ್ಲಿ  ದತ್ತಿನಿಧಿಯ ವಿಶೇಷ ಉಪನ್ಯಾಸವನ್ನು ಮತ್ತು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 34 ನೇ ಪಿಠಾರೋಹಣದ ಸವಿನೆನಪಿಗಾಗಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು  ಕನ್ನಡ ಸಾಹಿತ್ಯ ಪರಿಷತ್ ಘಟಕದಲ್ಲಿ ವೀರಶೈವ ಧರ್ಮದೊಡೆಯರು ಮತ್ತು ವೀರಶೈವ ಸಾಹಿತ್ಯ ರಚನೆ, ಸಾಮಾಜಿಕ ಸೇವೆಗೆ ವೀರಶೈವರ ಕೊಡುಗೆಗಳು ಕುರಿತು ಪ್ರತಿ ವರ್ಷದ ಡಿಸೆಂಬರ್ ತಿಂಗಳಲ್ಲಿ ದತ್ತಿನಿಧಿಯ ವಿಶೇಷ ಉಪನ್ಯಾಸ ಆಯೋಜನೆ ಮಾಡುವುದು ಮತ್ತು ಧಾರವಾಡದ ಪೆÇ್ರ.ಮಾಲತಿ ಎಸ್. ಹಿರೇಮಠ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ತಾಲೂಕು ಘಟಕದ ಆಶ್ರಯದಲ್ಲಿ  ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 31 ನೇ ಪಿಠಾರೋಹಣದ ಸವಿನೆನಪಿಗಾಗಿ ವೀರಶೈವ ಧರ್ಮ, ಸಾಹಿತ್ಯ, ಸಂಸ್ಕøತಿ ಮತ್ತು ಸಾಮಾಜಿಕ ಕ್ಷೇತ್ರಕ್ಕೆ  ರಂಭಾಪುರಿ ಶ್ರೀ ಪೀಠದ ಕೊಡುಗೆಗಳು ಕುರಿತು ಪ್ರತಿ ವರ್ಷದ ಫೆಬ್ರವರಿ ತಿಂಗಳಲ್ಲಿ  ವಿಶೇಷ ಉಪನ್ಯಾಸವನ್ನು ಆಯೋಜಿಸಲು  ಸಂಸ್ಥೆಯಿಂದ ಮನವಿ ಸಲ್ಲಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪೆÇ್ರ. ಕೆ.ಎಸ್.ಕೌಜಲಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ದತ್ತಿ ಉಪನ್ಯಾಸಗಳ ಸಂಯೋಜಕ ವೀರಶೈವ ಜಂಗಮ ಸಂಸ್ಥೆಯ ಡಾ.ಎಸ್.ಎಂ.ಹಿರೇಮಠ,  ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ, ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ, ಖಜಾಂಚಿ ಪಿ.ಎಸ್.ಹಿರೇಮಠ, ಹಾಗೂ ನಿರ್ದೇಶಕರಾದ ಪೆÇ್ರ.ಜಗದೀಶ ಕಾಡದೇವರಮಠ, ಡಾ.ಎಸ್.ಜಿ.ಮಠದ, ಗಂಗಯ್ಯ ಪ್ರಭುಸ್ವಾಮಿಮಠ, ಶರಣಬಸಯ್ಯ ಕುರ್ತಕೋಟಿ, ಸುಮಿತಾ ಹಿರೇಮಠ, ಎಂ.ಜಿ.ಹಿರೇಮಠ, ಬಸಯ್ಯ ಎನ್.ಹಿರೇಮಠ ಇದ್ದರು.