ಇಂದು ರಾಜ್ಯಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಗಾ ಗಾಂಧಿ ಭೇಟಿ

ಬೆಂಗಳೂರು: ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಎರಡನೇ ದೊಡ್ಡ ಭರವಸೆಯನ್ನು ಘೋಷಿಸಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಜ.16) ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು ದೃಢಪಡಿಸುವ ಉದ್ದೇಶದಿಂದ ಪ್ರಿಯಾಂಕಾ, ಹಾತ್ ಸೆ ಹಾತ್ ಜೋಡೋ ಮೆಗಾ ಸಮಾವೇಶದಲ್ಲಿ ಮಹಿಳಾ ಕೇಂದ್ರಿತ ಭರವಸೆಯನ್ನು ಘೋಷಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ.