ಒಂದು ಶಿಕ್ಷೆಯ ಅವಧಿ ಮುಗಿದ ನಂತ್ರ ಮತ್ತೊಂದು ಅನುಭವಿಸಬೇಕಿಲ್ಲ: ಎರಡು ಅಪರಾಧದ ಶಿಕ್ಷೆಗಳೂ ಒಟ್ಟಿಗೆ ಜಾರಿ - ಹೈಕೋರ್ಟ್

ಒಂದು ಶಿಕ್ಷೆಯ ಅವಧಿ ಮುಗಿದ ನಂತ್ರ ಮತ್ತೊಂದು ಅನುಭವಿಸಬೇಕಿಲ್ಲ: ಎರಡು ಅಪರಾಧದ ಶಿಕ್ಷೆಗಳೂ ಒಟ್ಟಿಗೆ ಜಾರಿ - ಹೈಕೋರ್ಟ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ( Life imprisonment ) ಗುರಿಯಾಗಿರುವ ಆರೋಪಿಗೆ, ಇತರ ಅಪರಾಧ ಕೃತ್ಯಗಳಲ್ಲೂ ಶಿಕ್ಷೆ ವಿಧಿಸಿದ್ದರೇ, ಆ ಎಲ್ಲಾ ಶಿಕ್ಷಗಳೂ ಜೀವಾವಧಿ ಶಿಕ್ಷೆಯೊಂದಿಗೆ ಏಕಕಾಲದಲ್ಲಿಯೇ ಜಾರಿಯಾಗಲಿದೆ.

ಒಂದು ಶಿಕ್ಷೆಯ ಅವಧಿ ಮುಗಿದ ನಂತ್ರ ಮತ್ತೊಂದು ಅನುಭವಿಸಬೇಕಾಗಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಸ್ಪಷ್ಟಪಡಿಸಿದೆ.

ಈ ಕುರಿತಂತೆ ಬಾಗೇಪಲ್ಲಿಯ ರಾಮಚಂದ್ರ ರೆಡ್ಡಿ ಮತ್ತು ಚಿಂತಾಮಣಿಯ ಕೆ ಆರ್ ಸುಕುಮಾರ್ ಎಂಬುವರು ಕೊಲೆ ಹಾಗೂ ದರೋಡೆಗಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಎರಡು ಪ್ರತ್ಯೇಕ ಶಿಕ್ಷೆಗಳಿಗೆ ಗುರಿಯಾಗಿದ್ದ ಪ್ರಕರಣದ ಕುರಿತಂತೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಕ್ರಿಮಿನಲ್ ಅರ್ಜಿಗಳನ್ನು ಮಾನ್ಯ ಮಾಡಿರುವಂತ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು, ಈ ಆದೇಶ ಹೊರಡಿಸಿದೆ.

ಇನ್ನೂ 22 ವರ್ಷದಿಂದ ಜೈಲಿನಲ್ಲಿರುವ ಅರ್ಜಿದಾರರೊಬ್ಬರಿಗೂ ಕ್ಷಮದಾನ ಅಥವಾ ಅವಧಿಪೂರ್ವ ಬಿಡುಗಡೆಗಾಗಿ ಸರ್ಕಾಕರಕ್ಕೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಅಂದಹಾಗೇ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ದರೋಡೆಗಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿ, ತೀರ್ಪು ನೀಡಿತ್ತು. ಈ ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದೆಯೇ ಅಥವಾ ಪ್ರತ್ಯೇಕವಾಗಿ ಅನುಭವಿಸಬೇಕೆ ಎಂಬ ಬಗ್ಗೆ ವಿಚಾರಣಾ ನ್ಯಾಯಲಯ ಸ್ಪಷ್ಟನೆ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.