ಅತ್ಯಾಚಾರಿಯ ತಾಯಿಗೆ ಗುಂಡಿಕ್ಕಿದ ಬಾಲಕಿ!

ದೆಹಲಿಯ ಭಜನ್‍ಪುರ ಪ್ರದೇಶದಲ್ಲಿ ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಗೆ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳು ಗುಂಡಿಕ್ಕಿ ಗಾಯಗೊಳಿಸಿದ ಘಟನೆ ನಡೆದಿದೆ.
2021ರಲ್ಲಿ 16 ವರ್ಷದ ಹುಡುಗಿಯ ಮೇಲೆ ಹುಡುಗನೊಬ್ಬ ಅತ್ಯಾಚಾರವೆಸಗಿದ್ದ. ಪ್ರತಿಯಾಗಿ ಬಾಲಕಿ ಆತನ ತಾಯಿಯನ್ನು ಕೊಲೆ ಮಾಡಲು ಯೋಜಿಸಿ ಪಿಸ್ತೂಲ್‍ನಿಂದ ಆತನ ತಾಯಿಗೆ ಗುಂಡು ಹಾರಿಸಿದ್ದಾಳೆ.
ಆತನ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ಬಂಧಿಸಿದ್ದಾರೆ. ಹುಡುಗನ ತಾಯಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ.