ʻ2024ರ ಅಂತ್ಯದೊಳಗೆ ಭಾರತೀಯ ರಸ್ತೆಗಳು ಅಮೆರಿಕದ ಗುಣಮಟ್ಟಕ್ಕೆ ಸಮನಾಗಿರುತ್ತವೆʼ: ಕೇಂದ್ರ ಸಚಿವ ನಿತಿನ್ ಗಡ್ಕರಿ

ʻ2024ರ ಅಂತ್ಯದೊಳಗೆ ಭಾರತೀಯ ರಸ್ತೆಗಳು ಅಮೆರಿಕದ ಗುಣಮಟ್ಟಕ್ಕೆ ಸಮನಾಗಿರುತ್ತವೆʼ: ಕೇಂದ್ರ ಸಚಿವ ನಿತಿನ್ ಗಡ್ಕರಿ

ವದೆಹಲಿ: 2024ರ ಅಂತ್ಯದೊಳಗೆ ಭಾರತದ ರಸ್ತೆ ಮೂಲಸೌಕರ್ಯ ಅಮೆರಿಕದ ಗುಣಮಟ್ಟಕ್ಕೆ ಸಮನಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಶುಕ್ರವಾರ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ 95ನೇ ಎಫ್‌ಐಸಿಸಿಐ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, 'ನಾವು ದೇಶದಲ್ಲಿ ವರ್ಲ್ಡ್ ಸ್ಟ್ಯಾಂಡರ್ಡ್ ರೋಡ್ ಮೂಲಸೌಕರ್ಯವನ್ನು ಮಾಡುತ್ತಿದ್ದೇವೆ ಮತ್ತು 2024ರ ಅಂತ್ಯದ ಮೊದಲು ನಮ್ಮ ರಸ್ತೆ ಮೂಲಸೌಕರ್ಯವು ಯುಎಸ್‌ಎ, ಅಮೆರಿಕದ ಮಾನದಂಡಗಳಿಗೆ ಸಮನಾಗಿರುತ್ತದೆ ಎಂದು ಭರವಸೆ ನೀಡುತ್ತೇವೆ ' ಎಂದಿದ್ದಾರೆ.

'ನಮ್ಮ ಲಾಜಿಸ್ಟಿಕ್ಸ್ ವೆಚ್ಚವು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ, ಇದು 16 ಪ್ರತಿಶತಕ್ಕೆ ಬರುತ್ತದೆ. ಆದರೆ, 2204 ರ ಅಂತ್ಯದವರೆಗೆ, ನಾವು ಅದನ್ನು ಶೇಕಡಾ 9 ರವರೆಗೆ ಒಂದೇ ಅಂಕೆಗೆ ಕೊಂಡೊಯ್ಯುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ' ಎಂದರು.