ಪಶುಸಂಗೋಪನೆ ಸಚಿವ ಮುಂಬಯಿಯಲ್ಲಿ ಗುಜ್ಜರಿ ಕೆಲಸ ಮಾಡಿಕೊಂಡ ಔರಾದಿಗೆ ಬಂದಿದ್ದು | Bidar |
ನಮ್ಮ ತಂದೆಯವರ ಬಗ್ಗೆ ಮಾತನಾಡುವ ನೈತಿಕತೆ ಸಚಿವ ಪ್ರಭು ಚವ್ಹಾಣಗೆ ಇಲ್ಲಾ ನಮ್ಮ ತಂದೆ ರಾಜಕೀಯದಲ್ಲಿದ್ದಾಗ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಬಾಂಬೆಯಲ್ಲಿ ಗುಜರಿ ಕೆಲಸ ಮಾಡುತ್ತಿದ್ದರು ಎಂದು ಹುಮನಬಾದ ಶಾಸಕ ಪಾಟೀಲ ರಾಜಶೇಖರ ಹೇಳಿದರು. ಚುನಾವಣೆ ಮುಗಿದ ಮೇಲೆ ಸಚಿವ ವರ್ಗಾವಣೆ ವಸೂಲಿ ದಂದೆಯಲ್ಲಿ ಇಳಿದಿದ್ದಾರೆ ಯಾವ ಅಧಿಕಾರಿ ನಿಮಗೆ ಎಷ್ಟು ಹಣ ತಂದು ಕೊಟ್ಟಿದ್ದಾರೆ ಎಂಬುದು ಎಳೆ ಎಳೆಯಾಗಿ ಸಾಕ್ಷಿ ಸಮೇತ ಬಿಚ್ಚಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸಚಿವ ಚವ್ಹಾಣ ನಮ್ಮ ಕುಟುಂಬದ ಬಗ್ಗೆ ಚಕಾರ ಎತ್ತುತ್ತಿರುವುದು ಸರಿಯಲ್ಲ ಅದರಲ್ಲೂ ಲಿಂಗೈಕ್ಯರಾದ ನಮ್ಮ ತಂದೆ ಲಿಂಗ್ಯಕ್ಕೆ ಬಸವರಾಜ ಪಾಟೀಲ ಬಗ್ಗೆ ಮಾತನಾಡಿದರೆ ಸಚಿವ ಪ್ರಭು ಚವ್ಹಾಣ ರವರ ಜನ್ಮ ಜಾಲಾಡುತ್ತೇನೆ ಎಂದು ಸಚಿವರ ವಿರುದ್ಧ ಶಾಸಕ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು