ಹೆರಾತ್ ನಲ್ಲಿ ಬಾಲಕ- ಬಾಲಕಿಯರ ಸಹ ಶಿಕ್ಷಣಕ್ಕೆ ನಿಷೇಧ ಹೇರಿದ ತಾಲಿಬಾನ್

ಕಾಬೂಲ್ ;ತಾಲಿಬಾನ್ ಅಧಿಕಾರಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಮೊದಲ 'ಫತ್ವಾ' ಹೊರಡಿಸಿದ್ದಾರೆ.ಹೆರಾತ್ ಪ್ರಾಂತ್ಯದ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಹ-ಶಿಕ್ಷಣವನ್ನು ಅಂದರೆ ಹುಡುಗ- ಹುಡುಗಿ ಒಟ್ಟಿಗೆ ಒಂದೇ ಕಡೆ ಓದುವುದನ್ನು ನಿಷೇಧಿಸಲಾಗಿದೆ. 'ಕೋ- ಎಜುಕೇಷನ್ ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ ಎಂದು ಹೇಳಿರುವ ತಾಲಿಬಾನ್ ಅಧಿಕಾರಿಗಳು, ದೇಶವು ದೊಡ್ಡ ಹಿಂಜರಿಕೆಗೆ ಒಳಗಾಗುವ ಭಯವನ್ನು ಇದು ಹೆಚ್ಚು ಮಾಡುತ್ತದೆ. ಅಲ್ಲದೇ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ತಾಲಿಬಾನ್ ನಾಯಕರುಗಳು ಕೊಟ್ಟಿದ್ದ ಭರವಸೆಗಳ ಹೊರತಾಗಿಯೂ ಈ ಫತ್ವಾ ಹೊರಬಿದ್ದಿದೆ. ಈ ಅಂಶವನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಜಾರಿಯಾಗುವ ಸುಳಿವು ನೀಡಿದ್ದಾರೆ ತಾಲಿಬಾನ್ ಗಳು.
ಅಫ್ಘಾನಿಸ್ತಾನದಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಭಯೋತ್ಪಾದಕ ಗುಂಪು ಪ್ರತಿಜ್ಞೆ ಮಾಡಿದ ಮೇಲೂ ಕೂಡ ಈ ಘೋಷಣೆ ಬಂದಿರುವುದು ನೋಡಿದರೆ, ಇನ್ನೂ ಮುಂದೆ ಸಾಕಷ್ಟು ಇದೇ ರೀತಿಯ ಫತ್ವಾಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವೆ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಖಾಮಾ ಪ್ರೆಸ್ ನ್ಯೂಸ್ ವರದಿ ಮಾಡಿದೆ.