ಕಲಬುರಗಿಯಲ್ಲಿ ರಾಜ್ಯ ಸಭಾ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪದೆ ಒದೇ ಹೆಚ್ಚಿಸಿದ್ದರಿಂದ ದೇಶದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚತ್ತಿದೆ. ಅದರೆ, ದೇಶದಲ್ಲಿರೋ ಕೆಲವೊಂದಿಷ್ಟು ವಿಕೃತ ಮನಸ್ಸಿನ ಜನ ಡಿಸೇಲ್, ಪೆಟ್ರೋಲ್ ಬೆಲೆ ಆದ್ರೆ ಪರವಾಗಿಲ್ಲ ಅಂತಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರ ಬಳಿ ದುಡ್ಡು ಇದೆ ಅಂತವರು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾದ್ರು ಪರವಾಗಿಲ್ಲ ಅಂತಾರೆ ಎಂದರು. ಯುಪಿಎ ಕಾಲದಲ್ಲಿ 120 ಡಾಲರ್ ಇದ್ದಾಗ 65 &70 ರೂ.ಗೆ ಲೀಟರ್ ಬೆಲೆ ಇತ್ತು. ಆದರೆ ಈಗ 50 ಡಾಲರ್ ಗೆ ಒಂದು ಬ್ಯಾರಲ್ ಕಚ್ಚಾತೈಲ ಸಿಗುತ್ತಿದೆ. ಆದರೂ ಲೀಟರ್ ಗೆ 108 ರೂ.ಗೆ ಪೆಟ್ರೋಲ್,100 ರೂ.ಗೆ ಡಿಸೇಲ್ ಬೆಲೆ ಆಗಿದೆ. ಬಿಜೆಪಿ ಸರ್ಕಾರ ಎಕ್ಸೈಸ್ ಡ್ಯೂಟಿ ದಿನೆ ದಿನ ಏರಿಸಿದ್ದರಿಂದ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರ ಎಕ್ಸೈಸ್ ಜಾಸ್ತಿ ಮಾಡಿದೆ ಅಂತ ರಾಜ್ಯ ಸರ್ಕಾರಗಳು GST ಹೆಚ್ಚಿಗೆ ಮಾಡುತ್ತಿವೆ. ಇದರಿಂದ ಬಡವರು ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದ್ರು. ಇನ್ನೂ ಮೋದಿಯವರು ಜನರ ಮೇಲೆ ಬಹು ದೊಡ್ಡ ಹೊಡೆತ ಕೊಡುತ್ತಿದ್ದಾರೆ. ನಾವು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, 5 ರೂ.10 ರೂ.ಹೆಚ್ಚಿಗೆ ಆದಾಗ ಬೀದಿಗೆ ಬರುತ್ತಿದ್ದರು ಈಗ ಯಾಕೆ ಬರುತ್ತಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.