ತುಪರಿ ಮತ್ತು ಬೆಣ್ಣಿ ಹಳ್ಳಗಳ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸರಕಾರಕ್ಕೆ ಶಿಫಾರಸ್ಸು | Dharwad |
ಧಾರವಾಡ ಜಿಲ್ಲೆಯ ತುಪರಿ ಮತ್ತು ಬೆಣ್ಣಿ ಹಳ್ಳಗಳ ಪ್ರವಾಹದಿಂದ ಆಗುವ ಅನಾಹುತ ತಪ್ಪಿಸುವ ಸಲುವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ರೈತ ಹಿತರಕ್ಷಣಾ ಸಮಿತಿಯಿಂದ ಧಾರವಾಡದಲ್ಲಿ ಇಂದು ಕೇಂದ್ರ ಸರ್ಕಾರದ ಅತಿವೃಷ್ಟಿ ಆಧ್ಯಯನ ತಂಡಕ್ಕೆ ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮತ್ತು ಜಿಲ್ಲೆಯಲ್ಲಿ ಹರಿಯುವ ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳಗಳ ಪ್ರವಾಹದಿಂದ ರೈತರ 80 ಸಾವಿರಕ್ಕೂ ಅಧಿಕ ಹೆಕ್ಟೇರು ಜಮೀನಿನಲ್ಲಿನ ಫಸಲು ನಾಶವಾಗಿದೆ. ಜಿಲ್ಲೆಯಲ್ಲಿ ಹರಿಯುವ ೧೦೨ ಕಿ.ಮೀ. ವ್ಯಾಪ್ತಿಯಲ್ಲಿನ ೨೫ ಕ್ಕೂ ಹೆಚ್ಚು ಹಳ್ಳಿಗಳು ತುಪ್ಪರಿ ಹಳ್ಳದ ನೆರೆಯಿಂದ ಬಾಧಿತವಾಗಿವೆ. ಅದೇ ರೀತಿ ಬೆಣ್ಣಿ ಹಳ್ಳದಿಂದ ಪ್ರತಿವರ್ಷ ಜನರು ತೊಂದರೆಗೀಡಾಗುತ್ತಿದ್ದಾರೆ. ಕಳೆದ 2 ವರ್ಷದ ಮಳೆ ಮತ್ತು ನೆರೆಯಿಂದ ಉಂಟಾದ ತೊಂದರೆಯಿಂದ ಜಿಲ್ಲೆಯ ರೈತರು ಸೇರಿದಂತೆ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಸರಕಾರ ಪರಿಹಾರ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರವು ಫಲಾನುಭವಿಗಳನ್ನು ತಲುಪಲಿಲ್ಲ. ಅಲ್ಲದೇ ಇದುವರೆಗೂ ಬಹಳಷ್ಟು ಜನರಿಗೆ ಪರಿಹಾರ ಸಿಕ್ಕಿಲ್ಲ ಎಂಬುದು ವಿಷಾಧಕರ ಸಂಗತಿ. ಈ ಸಂದರ್ಭದಲ್ಲಿ ಸಂಚಾಲಕರಾದ ಪಿಎಚ್ ನೀರಲಕೇರಿ. ಶ್ರೀಶೈಲ ಗೌಡ ಕಮತರ್. ಶಿವಾನಂದ ಹಾದಿಮನಿ. ಸಾಯಿ ರಾಮ್ ಕಾಳೆ. ನಾಗಯ್ಯ ಕಡ್ಲಿ. ಇನ್ನು ಹಲವಾರು ರೈತ ಮುಖಂಡರು ಉಪಸ್ಥರಿದ್ದರು.