KSRTC ನಿವೃತ್ತ ನೌಕರ'ರೇ ಗಮನಿಸಿ: ಮಾ.3 'ಪಿಂಚಣಿ ವಂತಿಕೆ ಸಂದಾಯಕ್ಕೆ ಜಂಟಿ ಆಯ್ಕೆ ಪತ್ರ' ಸಲ್ಲಿಸಲು ಕೊನೆ ದಿನ

KSRTC ನಿವೃತ್ತ ನೌಕರ'ರೇ ಗಮನಿಸಿ: ಮಾ.3 'ಪಿಂಚಣಿ ವಂತಿಕೆ ಸಂದಾಯಕ್ಕೆ ಜಂಟಿ ಆಯ್ಕೆ ಪತ್ರ' ಸಲ್ಲಿಸಲು ಕೊನೆ ದಿನ

ಬೆಂಗಳೂರು : ಸಾರಿಗೆ ನಿಗಮಗಳಲ್ಲಿ ದಿನಾಂಕ 01-09-2014ರ ನಂತರ ನಿವೃತ್ತಿ ಹೊಂದಿರುವ (ಪಿಂಚಣಿ ವಯೋಮಿತಿ 58 ವರ್ಷ ಪೂರ್ಣಗೊಂಡ) ರಾಜಿನಾಮೆ ಸ್ವಯಂ ನಿವೃತ್ತಿ ಹೊಂದಿರುವ ಸಂಸ್ಥೆಯ ಮಾಜಿ ನೌಕರರು ಹಾಗೂ ಪ್ರಸ್ತುತ ಸೇವಾ ನಿರತರಿರುವ ಎಲ್ಲಾ ನೌಕರರು ಪಿಂಚಣಿ ಯೋಜನೆ-1995 ರಲ್ಲಿ ಇ.ಪಿ.ಎಫ್.ಓ ರವರು ಕಾಲಕಾಲಕ್ಕೆ ನಿಗಧಿಪಡಿಸಿರುವ ನೌಕರರ ವೇತನ ಮಿತಿ ಪಿಂಚಣಿ ವಂತಿಕೆಯ ಬದಲಾಗಿ, ಒಟ್ಟು ವೇತನದ ಮೇಲೆ ಪಿಂಚಣಿ ವಂತಿಕೆ ಸಂದಾಯ ಮಾಡಲು ಇಚ್ಚಿಸುವ ನೌಕರರು ಜಂಟಿ ಆಯ್ಕೆ ಪತ್ರವನ್ನು ಸಲ್ಲಿಸಲು ದಿನಾಂಕ 03-03-2023 ಕೊನೆಯ ದಿನವಾಗಿದೆ.

ಎಲ್ಲಾ ಅರ್ಜಿ ನೌಕರರು ಅಂದರೆ, ವೇತನದ ಮೇಲೆ ಪಿಂಚಣಿ ವಂತಿಕೆ ಸಂದಾಯ ಮಾಡಲು ಇಚ್ಚಿಸುವ ನೌಕರರು ಜಂಟಿ ಆಯ್ಕೆ ಪತ್ರವನ್ನು ದಿನಾಂಕ 01-03-2023ರ ಒಳಗಾಗಿ ಆಯಾ ಘಟಕಗಳು / ಕಾರ್ಯಗಾರ / ಕೇಂದ್ರ ಕಛೇರಿಗಳಲ್ಲಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ. ಇ.ಪಿ.ಎಫ್.ಓ ರವರ ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಜಂಟಿ ಆಯ್ಕೆ ಪತ್ರ ಸಲ್ಲಿಸಲು ತಿಳಿಸಿದಲ್ಲಿ ಅದರಂತೆ ಕ್ರಮವಹಿಸುವುದು, ನೌಕರರು ಜಂಟಿ ಆಯ್ಕೆ ಪತ್ರವನ್ನು ಸಂಸ್ಥೆಯ ಘಟಕಗಳು /ಕಾರ್ಯಗಾರ/ಕೇಂದ್ರ ಕಛೇರಿಗಳಲ್ಲಿ ಹಾಗೂ ರಜೆ ನಿರ್ವಹಣಾ ತಂತಾಂಶ ದಲ್ಲಿ ಲಭ್ಯವಿದ್ದು, ಅವುಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಘಟಕಗಳು /ಕಾರ್ಯಗಾರ /ಕೇಂದ್ರ ಕಛೇರಿಗಳಲ್ಲಿ ಸಲ್ಲಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.