ಮತ್ತೆ ಫೀಲ್ಡಿಗಿಳಿದ ಕೆ.ಆರ್.ಪುರ ಸಂಚಾರ ಪೆÇಲೀಸರು; ವೀಲಿಂಗ್ ಪುಂಡರು ಅಂಧರ್! Bangalore | K.R pura
ಕಳೆದ ಎರಡು ವಾರಗಳಲ್ಲಿ ಸುಮಾರು 6 ವೀಲಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್ .ಪುರ ಸಂಚಾರ ಪೋಲಿಸರು ಇಂದು ಮತ್ತೆ 3 ಪ್ರಕರಣಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಶಾಂತರಾಜು ಐಪಿಎಸ್, ಡಿಸಿಪಿ -ಸಂಚಾರ ಪೂರ್ವ, ತಿಪ್ಪೇಸ್ವಾಮಿ- ಎಸಿಪಿ ಸಾಹೇಬರ ನಿರ್ದೇಶನದಂತೆ ಠಾಣಾಧಿಕಾರಿ ಮಹಮದ್.ಎಂ.ಎ ರವರು ಠಾಣಾ ವ್ಯಾಪ್ತಿಯಲ್ಲಿ, ವೀಲಿಂಗ್ ಸ್ಕ್ವಾಡ್ ಮೂಲಕ ವೀಲಿಂಗ್‍ಲ್ಲಿ ನಿರತರಾಗಿದ್ದ 3 ದ್ವಿಚಕ್ರ ವಾಹನಗಳನ್ನು ಮತ್ತು ಹಳೆ ಮದರಾಸು ರಸ್ತೆ ,ಟಿಸಿ ಪಾಳ್ಯ ಮತ್ತು ಅಯ್ಯಪ್ಪನಗರ ಮುಖ್ಯರಸ್ತೆಗಳಲ್ಲಿ ಸದರಿ ವಾಹನಗಳನ್ನು ಮತ್ತು ವಾಹನ ಸವಾರರನ್ನು ವಶಕ್ಕೆ ಪಡೆಯಲಾಗಿದೆ. ಸದರಿ ವಾಹನಗಳ ಸೈಲೆನ್ಸರ್‍ಗಳನ್ನು ಭಾರಿ ಶಬ್ದ ಬರುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಕೊಂಡಿದ್ದವರ ಮೇಲೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಸವಾರರಾದ ಸಾಗರ್, ಫೈರೋಜ್, ಸಂಜಯ ಗೌಡ ಮೊದಲಾದವರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಕೆಆರ್ ಪುರ ಸಂಚಾರ ಠಾಣಾ ಪೆÇಲೀಸ್ ಇನ್ಸ್ಪೆಕ್ಟರ್ ಮಹಮದ್, ಪಿಎಸ್‍ಐ ಸಯ್ಯದ್ ನಿಜಾಮುದ್ದೀನ್, ಅಶ್ವಥ್, ಪ್ರವೀಣ್ ಹಾಗೂ ಸಿಬ್ಬಂದಿ ನಂದೀಶ್, ಪ್ರಸನ್ನ, ಸುನಿಲ್ ಮೊದಲಾದವರು ಭಾಗವಹಿಸಿದ್ದರು.