ಗುರು ಕಾಶೀನಾಥ್ ಆಶೀರ್ವಾದ ಪಡೆದ ನೀರಜ್ ಚೋಪ್ರಾ | Uttara kannada |

ಭಾರತಕ್ಕೆ ಅಥ್ಲೆಟಿಕ್ಸ್‍ನಲ್ಲಿ ಚಿನ್ನದ ಪದಕ ತಂದ ನೀರಜ್ ಚೋಪ್ರಾ ಅವರು ಮಂಗಳವಾರ ಪುಣಾದ ಕೋರೆಗಾಂವ್‍ನಲ್ಲಿರುವ ತಮ್ಮ ಗುರು, ಕನ್ನಡಿಗ ಕಾಶಿನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. 2015ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಕಾಶಿನಾಥ್ ನಾಯ್ಕ್ ಅವರ ಪುಣಾ ಮನೆಗೆ ಭೇಟಿ ನೀಡಿ ನೀರಜ್ ಚೋಪ್ರಾ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಅವರು ಆರತಿ ಬೆಳಗಿ ಮನೆಗೆ ಸ್ವಾಗತಿಸಿದ್ರು. ಸುಮಾರು ಒಂದು ಗಂಟೆಗಳ ಕಾಲ ಗುರುಶಿಷ್ಯರು ಓಲಿಂಪಿಕ್ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು. ಅμÉ್ಟೀ ಅಲ್ಲ ಕಾಶೀನಾಥ್ ಅವರ ಮಕ್ಕಳ ಜೊತೆ ಮಗುವಾಗಿ ನೀರಜ್ ಚೋಪ್ರಾ ಸಾಕಷ್ಟು ಸಮಯ ಕಾಲ ಕಳೆದರು.