ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು

ಭವಿಷ್ಯದಲ್ಲಿ ಸಿದ್ದರಾಮಯ್ಯ ಹಠಾವೋ ಕಾಂಗ್ರೆಸ್ ಬಚಾವ್ ಎಂಬ ನಿರ್ಣಯಕ್ಕೆ ಕಾಂಗ್ರೆಸ್ ಪಕ್ಷ ಬರುತ್ತದೆ ಎಂದು ಬಿಜೆಪಿ ಜಿಲ್ಲಾ ಮುಖಂಡ ಅನೀಲ ಜಮಾದಾರ, ಕಾಸುಗೌಡ ಬಿರಾದರ, ರಮೇಶ ಧರನವರ, ಹಣಮಂತರಾಯಗೌಡ ಪಾಟೀಲ,ಸಿದ್ದಲಿಂಗ ಹಂಜಗಿ ಮತ್ತು ಭೀಮಸಿಂಗ್ ರಾಠೋಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದಲಿತ ಸಮುದಾಯದ ನಾಯಕರು ಹೊಟ್ಟೆಯ ಪಾಡಿಗಾಗಿ ಬಿಜೆಪಿ ಪಕ್ಷ ಸೇರುತ್ತಿದ್ದಾರೆಂದು ಎಂಬ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಇಂಡಿ ಮಂಡಲ ಎಸಿ ಮೊರ್ಚಾ ವತಿಯಿಂದ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ದಲಿತ ಸಮುದಾಯದ ಹೆಸರಲ್ಲಿ ಸುಮಾರು 70 ವರ್ಷ ಆಡಳಿತ ಮಾಡಿ, ಅವಶ್ಯಕತೆ ಮತ್ತು ಅಗತ್ಯತೆಗೆ ತಕ್ಕ ಹಾಗೇ ದಲಿತ ಸಮುದಾಯವನ್ನು ಉಪಯೋಗಿಸಿಕೊಂಡು ಇಂದು ಆಟಿಕೆ ವಸ್ತುವಿನಂತೆ ದಲಿತ ಸಮುದಾಯದ ನಾಯಕರ ಬಗ್ಗೆ ಕೆಳಮಟ್ಟದ ಹೇಳಿಕೆ ನೀಡಿರುವುದು ಘನತೆಗೆ ಶೋಭೆ ತರುವಂತಹದ್ದಲ್ಲಾ ಎಂದರು. ಈ ಕೂಡಲೇ ಸಾರ್ವಜನಿಕವಾಗಿ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು, ಇಲ್ಲವಾದರೆ ರಾಜ್ಯದಾದ್ಯಂತ ಮತ್ತಷ್ಟು ಉಗ್ರವಾದ ಹೋರಾಟ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶಿಲವಂತ ಉಮರಾಣಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದರ, ದೇವೇಂದ್ರ ಕುಂಬಾರ, ಯಲ್ಲಪ್ಪ ಹದರಿ, ಪಿಂಟು ರಾಠೋಡ, ಭೀಮಸಿಂಗ್ ರಾಠೋಡ, ಪ್ರಕಾಶ ರಾಠೋಡ, ಶಿವಯ್ಯಾ ರೂಗಿಮಠ, ಸೊಮು ನಿಂಬರಗಿಮಠ, ಮಲ್ಲಿಕಾರ್ಜುನ ವಾಲಕಾರ, ಪೂಜಾ ಗಜಾಕೋಶ, ಕವಿತಾ ಅಳೊಳ್ಳಿ, ಬೌರಮ್ಮ ನಾವಿ, ಅನುಸುಯಾ ಮದರಿ, ಶಿವಾನಂದ ಬಗಲಿ, ರವಿ ವಗ್ಗೆ, ವಿಜಯಲಕ್ಷ್ಮಿ ರೂಗಿಮಠ, ಸುನಂದಾ ವಾಲಿಕಾರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.