ಕೊಪ್ಪಳ ಜಿಲ್ಲೆಯ 157 ಮತಗಟ್ಟೆಯಲ್ಲಿ ಕೋವಿಡ್ ನಿಯಮದಂತೆ ಮತದಾನಕ್ಕೆ ವ್ಯವಸ್ಥೆ |Koppal|

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಕೊಪ್ಪಳ ಜಿಲ್ಲೆಯ 157 ಮತಗಟ್ಟೆಯಲ್ಲಿ ಮತದಾನ ಆರಂಭವಾಗಿದ್ದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಸುಮಾರು 2876 ಮತದಾರರಿಂದ ಹಕ್ಕು ಚಲಾವಣೆ ಮಾಡಲಿದ್ದಾರೆ ಗ್ರಾಪಂ ಕೇಂದ್ರ ಸ್ಥಾನ ಮತ್ತು ಸ್ಥಳೀಯ ಸಂಸ್ಥೆಯ ಕಚೇರಿಯಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 32 ಅತಿಸೂಕ್ಷ್ಮ, 52 ಸೂಕ್ಷ್ಮ, 73 ಸಾಮಾನ್ಯ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ಐದು ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೋವಿಡ್ ನಿಯಮದಂತೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಭದ್ರತಾ ಕಾರ್ಯಕ್ಕೆ 2 ಡಿಎಸ್ ಪಿ, 7 ಸಿಪಿಐ, 75 ಪಿಎಸ್ಐ, 118 ಎಚ್ ಸಿ ಮತ್ತು 147 ಪೇದೆ ನೇಮಿಸಲಾಗಿದೆ.