ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಈ ವರ್ಷವೂ ಇಲ್ಲ ಎಂ.ಎ. ಇತಿಹಾಸ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 2022–23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೂ ಎಂ.ಎ. ಇತಿಹಾಸ ವಿಷಯ ಕಲಿಕೆಗೆ ಅವಕಾಶ ಇಲ್ಲ. ಎಂ.ಎ ಕನ್ನಡ ಸಾಹಿತ್ಯ, ಎಂ.ಎ ಮಹಿಳಾ ಅಧ್ಯಯನ ವಿಭಾಗ, ಎಂ.ಎ ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ಅರ್ಜಿ ಕರೆಯಲಾಗಿದೆ. ಆದರೆ, ಅತಿ ಹೆಚ್ಚು ಬೇಡಿಕೆ ಇರುವ ಇತಿಹಾಸ ವಿಷಯವನ್ನೇ ಕೈಬಿಡಲಾಗಿದೆ. ಹೋದ ವರ್ಷವೂ ಎಂ.ಎ. ಇತಿಹಾಸದ ಪ್ರವೇಶ ಪ್ರಕ್ರಿಯೆ ನಡೆದಿರಲಿಲ್ಲ. ಈ ವರ್ಷವಾದರೂ ಎಂ.ಎ. ಇತಿಹಾಸ ಆರಂಭಿಸಬಹುದು ಎಂಬ ಪದವೀಧರರ ನಿರೀಕ್ಷೆ ಹುಸಿಯಾಗಿದೆ.