ಸಿಕ್ಕಿಬಿಡ್ತು ಕಟ್ಟುಗಟ್ಟಲೆ ಹಣ; ದಾಖಲೆರಹಿತ 1.9 ಕೋಟಿ ರೂ. ವಶ!

ಸಿಕ್ಕಿಬಿಡ್ತು ಕಟ್ಟುಗಟ್ಟಲೆ ಹಣ; ದಾಖಲೆರಹಿತ 1.9 ಕೋಟಿ ರೂ. ವಶ!

ಲಬುರಗಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈಗಾಗಲೇ ಹಲವೆಡೆ ಭಾರಿ ಪ್ರಮಾಣಲ್ಲಿ ಹಣ ಕೈಬದಲಾಗುತ್ತಿದೆ. ಈ ನಡುವೆಯೇ ಒಂದು ಕಡೆ ಕೋಟಿಗಟ್ಟಲೆ ಮೊತ್ತ ಕಟ್ಟುಕಟ್ಟು ಹಣ ಸಿಕ್ಕಿದೆ.

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್​ಪೋಸ್ಟ್​​ಗಳಲ್ಲಿ ಬುಧವಾರ ಯಾವುದೇ ದಾಖಲೆ ಇಲ್ಲದ ಅಂದಾಜು 1.9 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.‌ ಗುರುಕರ್ ತಿಳಿಸಿದ್ದಾರೆ.

ಇದರಲ್ಲಿ ಕಿಣ್ಣಿಸಡಕ್ ಚೆಕ್​ಪೋಸ್ಟ್ ಬಳಿ 1.4 ಕೋಟಿ, ಉಳಿದಂತೆ ಜೇವರ್ಗಿ ಚೆಕ್​ಪೋಸ್ಟ್ ನಲ್ಲಿ 50 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ಹಣವನ್ನು ಅಧಿಕಾರಿಗಳು ಲೆಕ್ಕ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ದಾಖಲಾತಿ ಇಲ್ಲದೆ ಸರಬಾರಜು ಮಾಡುತ್ತಿದ್ದ ಹಣ ವಶಕ್ಕೆ ಪಡೆದ ಪೊಲೀಸರು, ಜೇವರ್ಗಿ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.