ಸಕ್ರಿಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಇಲ್ಲ, ಪದ್ಮವಿಭೂಷಣ ಬಯಸದೇ ಬಂದ ಭಾಗ್ಯ: ಎಸ್.ಎಂ.ಕೃಷ್ಣ

ಬೆಂಗಳೂರು: 'ಪದ್ಮವಿಭೂಷಣ ಬಯಸದೇ ಬಂದ ಭಾಗ್ಯ' ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ .ಎಂ.ಕೃಷ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ.
'ಕಳೆದ 6 ದಶಕಗಳ ನನ್ನ ಸುದೀರ್ಘ ರಾಜಕೀಯ ಹಿನ್ನೆಲೆ, ಅದಕ್ಕೆ ಕನ್ನಡದ ಜನರು ಮಾಡಿದ ಅಖಂಡವಾದ ಆಶೀರ್ವಾದ ನನ್ನ ನೆನಪಿಗೆ ಬರುತ್ತದೆ. ಆದ್ದರಿಂದ ಈ ಪ್ರಶಸ್ತಿಯನ್ನ 7 ಕೋಟಿ ಕನ್ನಡರಿಗೆ ಅರ್ಪಿಸುತ್ತೇನೆ' ಎಂದರು.
'ಸಕ್ರಿಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಇಲ್ಲ': ನಿವೃತ್ತಿ ಘೋಷಣೆ ಮಾಡಿದ ಬಳಿಕ ಸಕ್ರಿಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಉದ್ಭವಿಸುವಿದಿಲ್ಲ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.