ಬಿಜೆಪಿಯಲ್ಲೂ ಶುರುವಾಯ್ತು `ಮುಖ್ಯಮಂತ್ರಿ' ಸ್ಥಾನಕ್ಕೆ ರೇಸ್ : ಸಂಚಲನ ಮೂಡಿಸಿದೆ ಸಿಎಂ ಬೊಮ್ಮಾಯಿ ಹೇಳಿಕೆ

ಬಾಗಲಕೋಟೆ : ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಬಳಿಕ ಇದೀಗ ಬಿಜೆಪಿಯಲ್ಲೂ ಮುಖ್ಯಮಂತ್ರಿ ಹುದ್ದೆಗೆ ರೇಸ್ ಶುರುವಾಗಿದೆಯಾ ಎಂಬ ಅನುಮಾಣ ಮೂಡಿದೆ.
ಬಾಗಲಕೋಟೆಯ ಮುಧೋಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ 'ನಗು ನಗುತ್ತಲೇ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸಚಿವ ಮುರುಗೇಶ್ ನಿರಾಣಿ ಕಾಲೆಳೆದಿದ್ದಾರೆ. ಚಿಂತೆ ಮಾಡಬೇಡಿ ಮುಂದೆಯೂ ಕೂಡ ಸಿಎಂ ಆಗಿಯೇ ನಾನು ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಅವಧಿಯಲ್ಲಾದ ಅಭಿವೃದ್ದಿ ಕೆಲಸಗಳ ಬಗ್ಗೆ ಪಟ್ಟಿ ಮಾಡಿ , ನಾವು ಕೂಡ ನಮ್ಮ ಅವಧಿಯಲ್ಲಾದ ಅಭಿವೃದ್ದಿ ಕೆಲಸಗಳ ಬಗ್ಗೆ ಪಟ್ಟಿ ಮಾಡುತ್ತೇವೆ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು. ಈ ಮೂಲಕ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮರ್ ನಡುವೆ ಫೈಟ್ ನಡೆಯುತ್ತಿದ್ದು, ಇದೀಗ ಬಿಜೆಪಿಯಲ್ಲೂ ಸಿಎಂ ಸ್ಥಾನದ ರೇಸ್ ಶುರುವಾಗಿದೆ.