ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಬೈಕ್ ಸವಾರರು ಸಾವು

ಬೆಂಗಳೂರು ; ಗ್ರಾಮಾಂತರ: ಬಿಬಿಎಂಪಿಯ ಕಸದ ಲಾರಿ ( BBMP's garbage truck ) ಹರಿದು ಈಗಾಗಲೇ ಕೆಲವರನ್ನು ಬಲಿ ಪಡೆಯಲಾಗಿದೆ. ಇಂದು ಈ ಸರಣಿ ಮುಂದುವರೆದಿದೆ. ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿಯಲ್ಲಿ ಬಿಬಿಎಂಪಿಯ ಕಸದ ಲಾರಿಯು ಬೈಕ್ ಗೆ ಡಿಕ್ಕಿಯಾಗಿದೆ. ಕಸದ ಲಾರಿ ಡಿಕ್ಕಿಯಾಗಿದ್ದರಿಂದ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಅವರ ಮೇಲೆಯೇ ಲಾರಿ ಹರಿದ ಪರಿಣಾಮ, ಸ್ಥಳದಲ್ಲಿಯೇ ಬೈಕ್ ನಲ್ಲಿ ಇದ್ದಂತ ಇಬ್ಬರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ, ಬೈಕ್ ಸಾವರರು ಸಾವನ್ನಪ್ಪಿದ ಘಟನೆಯ ನಂತ್ರ ಲಾರಿ ಬಿಟ್ಟು ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದಂತ ಚಾಲಕನನ್ನು ಪೊಲೀಸರಿಗೆ ಸ್ಥಳಿಯರು ಹಿಡಿದು ಒಪ್ಪಿಸಿದ್ದಾರೆ.ಅಂದಹಾಗೆ ಎರಡು ತಿಂಗಳ ಹಿಂದಷ್ಟೇ ಇಲ್ಲಿ ಓರ್ವ ಯುವಕ ಬಿಬಿಎಂಪಿ ಕಸದ ಲಾರಿಗೆ ಬಲಿಯಾಗಿದ್ದನು. ಈ ಬಳಿಕ ಇಂದು ಇಬ್ಬರು ಬೈಕ್ ಸವಾರರನ್ನು ಬಿಬಿಎಂಪಿಯ ಕಸದ ಲಾರಿ ಬಲಿ ಪಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.