ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಬಾರಿಸಿದ ಯುವಕ! ನಂತರ ನಡೆದಿದ್ದು ಮತ್ತೊಂದು ಎಡವಟ್ಟು

ತಿರುವನಂತಪುರಂ: ಯುವಕನೊಬ್ಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಕಪಾಳಕ್ಕೆ ಬಾರಿಸಿ ಎಸ್ಕೇಪ್ ಆಗುವಾಗ ಸರಣಿ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನೆಯ್ಯಟ್ಟಿಂಕರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯುವತಿಯ ಕೆನ್ನೆಗೆ ಬಾರಿಸಿದ ಯುವಕನನ್ನು ಅನವೂರ್ ಮೂಲದ ಶಿನೋಜ್ ಎಂದು ಗುರುತಿಸಲಾಗಿದೆ.
ಸರಣಿ ಅಪಘಾತದ ಬಳಿಕ ಕಾರು ರಸ್ತೆಯಲ್ಲಿ ಎದುರಿಗೆ ಸಿಕ್ಕ ಪೊಲೀಸ್ ಜೀಪ್ಗೂ ಡಿಕ್ಕಿ ಹೊಡೆದಿದೆ. ಕಪಾಳಕ್ಕೆ ಹೊಡೆತ ತಿಂದ ಯುವತಿ ಶಿನೋಜ್ನ ಗರ್ಲ್ಫ್ರೆಂಡ್ ಎಂದು ಹೇಳಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವ ದೃಶ್ಯ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಯುವತಿಯ ಫೋನ್ ಕಸಿದುಕೊಂಡು ಆಕೆಯ ಕಪಾಳಕ್ಕೆ ಬಾರಿಸಿ ಶಿನೋಜ್ ಎಸ್ಕೇಪ್ ಆಗುವಾಗ ಸರಣಿ ಅಪಘಾತ ನಡೆದಿದೆ.
ಶಿನೋಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್)