ತಮ್ಮ ಸಮುದಾಯಕ್ಕೆ ವಿವಿಧ ಬೇಡಿಕೆ ಇಟ್ಟ ಭಾರತದ ಮೊದಲ ಟ್ರಾನ್ಸ್ಜೆಂಡರ್ ಜಡ್ಜ್

ಭಾರತದ ಮೊದಲ ಟ್ರಾನ್ಸ್ಜೆಂಡರ್ ನ್ಯಾಯಾಧೀಶರಾದ ಜೋಯಿತಾ ಮೊಂಡಲ್ ಅವರು ತಮ್ಮ ಸಮುದಾಯದ ಸದಸ್ಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಅಗತ್ಯವನ್ನು ಶುಕ್ರವಾರ ಒತ್ತಿ ಹೇಳಿದರು. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಹೇಳಿದ ಮೊಂಡಲ್ ಅವರು, ಟ್ರಾನ್ಸ್ಜೆಂಡರ್ ಗಳಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುಬೇಕು. ತನ್ನ ಜನರಿಗೆ ಶಾಲೆಗಳು & ಆಸ್ಪತ್ರೆಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅಗತ್ಯವನ್ನು ಒತ್ತಿ ಹೇಳಿದರು