ತಂದೆಯ ಕೊಲೆಗೆ ಸುಫಾರಿ ಕೊಟ್ಟ ಮಗ: ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ತಂದೆಯ ಕೊಲೆಗೆ ಸುಫಾರಿ ಕೊಟ್ಟ ಮಗ: ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು: ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿರೋದು ಮಕ್ಕಳ ಕರ್ತವ್ಯ. ಆದ್ರೇ ಇಲ್ಲೊಬ್ಬ ಪುತ್ರ ಮಾತ್ರ ತಂದೆಯನ್ನೇ ಹತ್ಯೆಗೈಯ್ಯಲು ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಈ ಬಗ್ಗೆ ತನಿಖೆಯಲ್ಲಿ ಹೊರಬಿದ್ದ ಸ್ಪೋಟಕ ಮಾಹಿತಿ ಮುಂದೆ ಓದಿ.

ಆರೋಪಿ ಮಣಿಕಂಠ ಎಂಬಾತ ಮೊದಲ ಪತ್ನಿ ಕೊಂದ ಆರೋಪದಲ್ಲಿ ಜೈಲು ಸೇರಿ ಹೊರ ಬಂದ ನಂತ್ರ, ಎರಡನೇ ವಿವಾಹವಾಗಿದ್ದನು. ಆಕೆಗೆ ಒಂದು ಹೆಣ್ಣುಮಗು ಇತ್ತು. ಪತಿ-ಪತ್ನಿಯ ನಡುವೆ ವೈಮನಸ್ಸು ಉಂಟಾಗಿ 2ನೇ ಪತ್ನಿಗೂ ಡಿವೋರ್ಸ್ ನೀಡೋ ತಯಾರಿಯಲ್ಲಿದ್ದನು. ಇದೇ ವಿಚಾರವಾಗಿ ಚರ್ಚೆ ನಡೆಸುತ್ತಿದ್ದನು.

ಈ ವಿಷಯವನ್ನು ಅರಿತಂತ ತಂದೆ ನಾರಾಯಣಸ್ವಾಮಿ, ಪತ್ನಿಗೆ ಡಿವೋರ್ಸ್ ಕೊಡಬೇಡ ಎಂಬುದಾಗಿ ಮನವೊಲಿಸೋದಕ್ಕೆ ಯತ್ನಿಸಿದರು. ಈ ಮಾತು ಕೇಳದೇ ಇದ್ದಾಗ ಸೊಸೆ ಜೀವನ ನಡೆಸೋದು ಕಷ್ಟ ಆಗಲಿದೆ ಎಂಬ ಕಾರಣಕ್ಕೆ ತನ್ನ ಫ್ಲಾಟ್ ಅನ್ನು ಆಕೆಯ ಹೆಸರಿಗೆ ಬರೆದು ಕೊಡೋ ನಿರ್ಧಾರಕ್ಕೆ ನಾರಾಯಣಸ್ವಾಮಿ ಬಂದಿದ್ದನು.

ತಂದೆ ಪತ್ನಿಗೆ ಫ್ಲಾಟ್ ಕೊಡೋ ವಿಷಯ ಗೊತ್ತಾಗುತ್ತಿದ್ದಂತೆ ಪುತ್ರ ಮಣಿಕಂಠ ಕೆಂಡಾಮಂಡಲವಾದನು. ತಂದೆಯೊಂದಿಗೆ ಇದೇ ವಿಚಾರಕ್ಕೆ ಜಗಳ ಉಂಟಾಗಿ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಪದೇ ಪದೇ ತಂದೆ-ಮಗನ ನಡುವೆ ಜಗಳ ನಡೆಯುತ್ತಿತ್ತು.

ಇದೇ ಸಂದರ್ಭದಲ್ಲಿ ತಂದೆಯನ್ನು ಕೊಲೆ ಮಾಡಿಸೋ ನಿರ್ಧಾರಕ್ಕೆ ಬಂದಿದ್ದನು. ಇದಕ್ಕೆ ರೌಡಿ ಶೀಟರ್ ಶಿವಕುಮಾರ್ ಹಾಗೂ ಸಹಚರ ನವೀನ್ ಜೊತೆಗೆ 1 ಕೋಟಿಗೆ ಡೀಲ್ ಕುದುರಿಸಿದ್ದನು. ಮುಂಗಡವಾಗಿ 1 ಲಕ್ಷ ಹಣವನ್ನು ನೀಡಿದ್ದನು.

ಫೆಬ್ರವರಿ 13ರಂದು ಪಣತ್ತೂರಿನ ಕಾವೇರಪ್ಪ ಲೇಔಟ್ ಅಪಾರ್ಟ್ ಮೆಂಟ್ ಪಾರ್ಕಿಂಗ್ ಲಾಟ್ ನಲ್ಲಿ ನಾರಾಯಣಸ್ವಾಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆಯ ಬಳಿಕ ನಾರಾಯಣಸ್ವಾಮಿ ಪುತ್ರ ಮಣಿಕಂಠ ಅವರನ್ನು ಬಂಧಿಸಿ ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಸುಫಾರಿ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಅಲ್ಲದೇ ಕೌಟುಂಬಿಕ ಕಲಹದಿಂದ ಸುಫಾರಿ ನೀಡಿ, ತಂದೆಯನ್ನು ಕೊಲೆ ಮಾಡಿಸಿದ ವಿಷಯವನ್ನು ಹೇಳಿದ್ದಾನೆ. ಹೀಗಾಗಿ ಸುಫಾರಿ ಪಡೆದು ಹತ್ಯೆಗೈದ ಶಿವಕುಮಾರ್, ಸಹಚರ ನವೀನ್ ಹಾಗೂ ನಾರಾಯಣಸ್ವಾಮಿ ಪುತ್ರ ಮಣಿಕಂಠನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ