ಟರ್ಕಿಯಲ್ಲಿ ಮೇಡ್ ಇನ್ ಇಂಡಿಯಾ ಡ್ರೋನ್ಗಳ ಕಾರ್ಯಾಚರಣೆ

ಅಂಕಾರಾ\ಟರ್ಕಿ: ಭೂಕಂಪ ಪೀಡಿತ ಟರ್ಕಿಯಲ್ಲಿ ಭಾರತದ ಗರುಡ ಏರೋಸ್ಪೇಸ್ ನಿರ್ಮಿತ ಕಿಸಾನ್ ಡ್ರೋನ್ ಮಾದರಿಯ ಡ್ರೋನ್ಗಳು ಕಾರ್ಯಾಚರಣೆ ನಡೆಸಿ ಸಾವಿರಾರು ಜನರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಭಾರತದ ಎನ್ಡಿಆರ್ಎಫ್ ತಂಡ ಟರ್ಕಿಯಲ್ಲಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತ ನಿರ್ಮಿತ ಗರುಡ ಡ್ರೋನ್ಗಳು ತಮ್ಮ ಹದ್ದಿನ ಕಣ್ಣುಗಳಿಂದ ಟರ್ಕಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಚೆನೈ ಮೂಲದ ಗರುಡ ಏರೋಸ್ಪೇಸ್ ನಿರ್ಮಿಸಿರುವ ಆಧುನಿಕ ತಂತ್ರಜ್ಙಾನವನ್ನು ಹೊಂದಿದ್ದು ದುರ್ಗಮ ಪ್ರದೇಶಕ್ಕೆ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನೂ ಹೊಂದಿದೆ. ಎನ್ಡಿಆರ್ಎಫ್ ತಂಡದ ವಿಶೇಷ ಮನವಿ ಮೇರೆಗೆ ಗರುಡ ಏರೋಸ್ಪೇಸ್ ಭಾರತೀಯ ವಾಯುಪಡೆಯ ವಿಮಾನದಲ್ಲಿ ಎರಡು ಡ್ರೋನ್ಗಳನ್ನು ಟರ್ಕಿಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸವೆ.