ಚುನವಣೆಯಲ್ಲಿ ಬಿಜೆಪಿಯವರು 65 ರಿಂದ 70 ಸೀಟು ದಾಟುವುದಿಲ್ಲ: ಎಂಬಿ ಪಾಟೀಲ್​

ಚುನವಣೆಯಲ್ಲಿ ಬಿಜೆಪಿಯವರು 65 ರಿಂದ 70 ಸೀಟು ದಾಟುವುದಿಲ್ಲ: ಎಂಬಿ ಪಾಟೀಲ್​

ಬೆಂಗಳೂರು: ಬೆಳಗಾವಿಯಲ್ಲಿ ನಾವು 12 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ. ಮುಂಬೈ ಕರ್ನಾಟಕದಲ್ಲಿ ನಾವು ಮೇಜರ್ ಸೀಟು ಗೆಲ್ಲುತ್ತೇವೆ. ಕಾಂಗ್ರೆಸ್​ಗೆ 130-140 ಸೀಟು ಬಂದೇ ಬರುತ್ತದೆ. 130-140 ಸೀಟಿಗಿಂತ ಕಾಂಗ್ರೆಸ್ ಕಡಿಮೆ ಬರುವುದಿಲ್ಲ.

ಬಿಜೆಪಿಯವರು 65 ರಿಂದ 70 ಸೀಟು ದಾಟುವುದಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಬಯಸುವುದಿಲ್ಲ. ಅದಕ್ಕೆ ಉತ್ತರ ಕೊಡಬೇಕಾಗಿದ್ದು ಅಧ್ಯಕ್ಷರು ಅವರೇ ಉತ್ತರ ಕೊಡುತ್ತಾರೆ. ಅದನ್ನು ಬಿಟ್ಟು ಬೇರೇ ಏನಾದರೂ ಕೇಳಿ. ಹೊಡೆಯೋದು ಬಿಡೋದು ಜನರು ಹೊರತು ಬೇರೆ ಯಾರೂ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.

ಪಂಚಮಸಾಲಿ ಸಮುದಾಯ ಮಾತ್ರವಲ್ಲ ಎಲ್ಲ ಸಮುದಾಯಗಳಿಗೂ ಮಾನ್ಯತೆ ನೀಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಕ್ಕೂ ನ್ಯಾಯ ಕೊಡಿಸುವ ಕೆಲಸ ಆಗುತ್ತದೆ. ಸ್ಕ್ರೀನಿಂಗ್ ಕಮಿಟಿ ಹಾಗೂ ಚುನಾವಣಾ ಸಮಿತಿ ಚರ್ಚೆ ಬಳಿಕ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.