ಚಿಕ್ಕಬಳ್ಳಾಪುರದಲ್ಲಿ ಮೂವರು ಮಕ್ಕಳ ಜೊತೆಗೆ ಮೊಬೈಲ್ ಟವರ್ ಏರಿದ ತಂದೆ! ಮುಂದೇನಾಯ್ತು ಗೊತ್ತಾ?

ಚಿಕ್ಕಬಳ್ಳಾಪುರದಲ್ಲಿ ಮೂವರು ಮಕ್ಕಳ ಜೊತೆಗೆ ಮೊಬೈಲ್ ಟವರ್ ಏರಿದ ತಂದೆ! ಮುಂದೇನಾಯ್ತು ಗೊತ್ತಾ?

ಚಿಕ್ಕಬಳ್ಳಾಪುರ : ಜಮೀನು ವಿವಾದದಲ್ಲಿ ಅನ್ಯಾಯವಾಗಿದೆ ಎಂದು ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ಚಿಕ್ಕಬಳ್ಳಾಪು ಜಿಲ್ಲೆಯ ಚಿಂತಾಮಣಿಯ ಕನ್ನಂಪಲ್ಲಿ ಎಂಬಲ್ಲಿ ನಡೆದಿದೆ.

ಕನ್ನಂಪಲ್ಲಿಯಲ್ಲಿ ತನಗೆ ಜಮೀನು ವಿವಾದದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ಮೊಬೈಲ್ ಟವರ್ ಏರಿದ್ದಾನೆ. ವೆಂಕಟರೆಡ್ಡಿ, ಮಲ್ಲಪ್ಪ, ನಾರಾಯಣಪ್ಪ ವಿರುದ್ಧ ವಂಚನೆ ಆರೋಪ ಮಾಡಿದ್ದು, ಜಮೀನು ವಿವಾದದಲ್ಲಿ ತನಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸುವಂತೆ ಕೋರಿ ಮೊಬೈಲ್ ಟವರ್ ಏರಿದ್ದಾನೆ.

ತಂದೆ ಗಂಗರಾಜು (35), ತನ್ನ ಮಕ್ಕಳಾದ ನಿತಿನ್ (4), ಅಂಕಿತಾ (11) ಹಾಗೂ ನಿಖಿಲ್ (9) ಮಕ್ಕಳೊಂದಿಗೆ ಮೊಬೈಲ್ ಟವರ್ ಏರಿ ಕುಳಿತಿದ್ದ. ಈ ವೇಳೆ ಸ್ಥಳೀಯ ಪೊಲೀಸರು ನಾಲ್ವರನ್ನು ಕೆಳಗೆ ಇಳಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.