ಕುಮಾರಸ್ವಾಮಿ ಆರೋಪ ಶುದ್ಧಸುಳ್ಳು: ಸಚಿವ ಆನಂದ್ ಸಿಂಗ್

ಹೊಸದಿಗಂತ ವರದಿ ಬಳ್ಳಾರಿ:
ಅಕ್ರಮ ಆಸ್ತಿ ಪರಭಾರೆ ಕುರಿತು ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಮಾಡಿರುವ ಆರೋಪ ಶುದ್ಧ ಸುಳ್ಳು, 50ಲಕ್ಷ ರೂ.ಹಣದ ಬೇಡಿಕೆ ಇಟ್ಟಿದ್ರು, ಕೊಡದಿದ್ದಕ್ಕೆ ಚುನಾವಣೆ ವೇಳೆ ಈ ರೀತಿ ನನ್ನ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ ಸಿಂಗ್ ಅವರು ಅಕ್ರಮವಾಗಿ ಆಸ್ತಿಯನ್ನು ಪರಭಾರೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಶುದ್ಧ ಸುಳ್ಳು, ಇದೊಂದು ವ್ಯವಸ್ಥಿತ ಪಿತೂರಿ, ಕುಮಾರಸ್ವಾಮಿ ಈ ಹಿಂದೆ ಬೇರೋಬ್ಬರ ಮೂಲಕ 50ಲಕ್ಷ ರೂ.ಹಣದ ಬೇಡಿಕೆ ಇಟ್ಟಿದ್ದರು, ನನಗೂ ಕರೆ ಮಾಡಿ ಬೇಡಿಕೆದ್ದರು, ಇದು ಸುಳ್ಳು ಎನ್ನುವದಾರೇ ಸಂಡೂರು ಶ್ರೀ ಕುಮಾರಸ್ವಾಮೀ ದೇಗುಲಕ್ಕೆ ಅವರೂ ಬರಲಿ, ನಾನು ಬರುವೆ
ಆಣೆ ಮಾಡಲಿ, ನಾನೂ ಮಾಡುವೆ, ನನ್ನ ರಾಜಕೀಯ ಜೀವನದಲ್ಲಿ ಇಂತಹ ವ್ಯವಹಾರ ಮಾಡಿಯೇ ಇಲ್ಲ, ಅದು ನನ್ನ ಜಾಯಮಾನವೂ ಅಲ್ಲ, ನಾನು ಶುದ್ಧ ಬಿಳಿ ಹಾಲಿನಂತೆ ರಾಜಕೀಯ ಜೀವನದಲ್ಲಿರುವೆ, ನಾನೂ ಯಾರಿಗೆ ತೊಂದರೆ ನೀಡಿಲ್ಲ, ಇಂತಹ ಅಕ್ರಮದ ವಾಸನೆಯೂ ನನ್ನ ಬಳಿಯೂ ಇಲ್ಲ, ಅಭಿವೃದ್ಧಿಯೇ ನನ್ನ ಮೊದಲ ಗುರಿ, ನನ್ನ ಜನರೇ ನನ್ನ ಪ್ರಾಣ, ಹೀಗಿರುವಾಗ ಅಕ್ರಮ ಆಸ್ತಿ ಪರಭಾರೆ ಮಾಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ, ನಾನು ಯಾವುದೇ ತಪ್ಪು ಮಾಡಿಲ್ಲ, ಅಲ್ಲಿಯೇ ತೀರ್ಮಾನವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪೋಲಪ್ಪನ ವಿಚಾರದಲ್ಲಿ ನಗರಸಭಾ ಸದಸ್ಯ ಖದೀರ್ ಹಾಗೂ ಇನ್ನೋಬ್ಬ ಮಾಜಿ ಸದಸ್ಯರಿಬ್ಬರು ಸಂದಾನಕ್ಕೆ ಬಂದಿದ್ದರು, ಈ ವೇಳೆ 50 ಲಕ್ಷ ಹಣದ ಬೇಡಿಕೆ ಕುರಿತು ಪ್ರಸ್ತಾಪ ಮಾಡಲಾಗಿತ್ತು. ಇವರ ಸಂಧಾನಕ್ಕೆ ನಾನು ಒಪ್ಪಲಿಲ್ಲ, ತಪ್ಪು ಮಾಡದಿರುವ ನಾನು ಸಂಧಾನಕ್ಕೆ ಯಾಕೆ ಒಪ್ಪಲಿ, ಲೋಕದಲ್ಲಿ ದೂರು ದಾಖಲಾಗಿದೆ, ಅಲ್ಲಿಯೇ ನಿರ್ಧಾರವಾಗಲಿ, ಇವರ ಈ ಹುನ್ನಾರಕ್ಕೆ ಬಗ್ಗುವ ಜಾಯಮಾನ ನನ್ನದಲ್ಲ ಎಂದು ಎಚ್ಚರಿಸಿದರು.